ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್ ಜಿಹಾದ್: ಉತ್ತರ ಪ್ರದೇಶದಲ್ಲಿ ಒಂದೇ ಕುಟುಂಬದ 10 ಜನರ ಮೇಲೆ ಪ್ರಕರಣ ದಾಖಲು

ಆಗ್ರಾ: ಮನೆ ತೊರೆದ 21 ವರ್ಷದ ಮಹಿಳೆ ಸುಮಾರು ಒಂದು ತಿಂಗಳ ನಂತರ ಇಸ್ಲಾಂಗೆ ಮತಾಂತರಗೊಂಡು ದೆಹಲಿಯಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗುತ್ತಾರೆ. ಉತ್ತರ ಪ್ರದೇಶದ ಪೊಲೀಸರು ಹೊಸ ಲವ್ ಜಿಹಾದ್ ಕಾನೂನಿನ ಅಡಿ ಮುಸ್ಲಿಂ ಯುವಕ ಮತ್ತು ಆತನ ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲಿಸಲಾಗಿದೆ.

25 ವರ್ಷದ ಮೊಹಮ್ಮದ್ ಜಾವೇದ್ ನನ್ನು ಬಿಟ್ಟು ಅವರ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿದೆ.. ಇನ್ನು ತಲೆಮರೆಸಿಕೊಂಡ ನಾಲ್ಕು ಜನರನ್ನು ಬಂಧಿಸಬೇಕಿದೆ. ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಈಗ 25 ಸಾವಿರ ರೂ.ಗಳ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.

ಯುವತಿಯ ತಂದೆ ಗುರುವಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜಾವೇದ್ ಪರ ವಕೀಲರು ನ್ಯಾಯಾಲಯಕ್ಕೆ ಯುವತಿ ಮತಾಂತರ ಮತ್ತು ಮದುವೆಯ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ ರಾಮ್ ನಿವಾಸ್ ಸಿಂಗ್, ಜಾವೇದ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 366 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪೊಲೀಸರು ಹೇಳುವಂತೆ ನವೆಂಬರ್ 17 ರಿಂದ ಮಹಿಳೆ ಕಾಣೆಯಾಗಿದ್ದಳು. ಜಾವೇದ್ ಆಕೆಯ ಮನೆ ಸಮೀಪವೇ ವಾಸವಿದ್ದ. ಆದರೆ ಮಹಿಳೆ ಕುಟುಂಬದವರು ಆರಂಭದಲ್ಲಿ ದೂರು ದಾಖಲಿಸಿರಲಿಲ್ಲ.

ಕುಟುಂಬದವರ ವಿಚಾರಣೆ ನಡೆಸಿರುವ ಪೊಲೀಸರು ಬಲವಂತದ ಮತಾಂತರ ನಡೆದಿರುವ ಸಾಧ್ಯತೆ ಇದೆ ಎಂದಿದ್ದು ಕುಟುಂಬದ ಎಲ್ಲ ಸದಸ್ಯರು ಜಾವೇದ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

22/12/2020 10:48 pm

Cinque Terre

88.01 K

Cinque Terre

7