ಲಕ್ನೋ: ಪಾಪಿ ಪುತ್ರನೊಬ್ಬ ತನ್ನ ತಂದೆ-ತಾಯಿಯನ್ನೇ ಕೊಲೆಗೈದು ಬೆಂಕಿ ಇಟ್ಟು ಕಥೆ ಕಟ್ಟಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಬುಡಾನ್ ನಿವಾಸಿಗಳಾದ ರಾಜೇಂದ್ರ(61) ಹಾಗೂ ರಾಜ್ವತಿ(57) ಮೃತ ದುರ್ದೈವಿ ವೃದ್ಧ ದಂಪತಿ. ಡಿಸೆಂಬರ್ 15ರಂದು ಸಾವನ್ನಪ್ಪಿದ್ದರು. ಈ ದಂಪತಿಗೆ ನಾಲ್ವರು ಪುತ್ರರಿದ್ದು, ನಾಲ್ಕು ಮಂದಿ ಕೂಡ ಹೆತ್ತವರಿಂದ ದೂರವಾಗಿದ್ದಾರೆ.
ವೃದ್ಧ ದಂಪತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತ ಉಂಟಾಗಿತ್ತು. ಸುಮಾರ 20 ವಯಸ್ಸಿನ ಪುತ್ರರಿಬ್ಬರು ತಂದೆ-ತಾಯಿಯನ್ನು ಕೋಣೆಯಲ್ಲಿ ಕತ್ತುಹಿಸುಕಿ ಕೊಲೆ ಮಾಡಿ ಬಳಿಕ ಬೆಂಕಿ ಹಚ್ಚಿದ್ದಾರೆ. ಆದರೆ ಆರೋಪಿಗಳು ಪೋಷಕರು ಮಲಗಿದ್ದಾಗ ಅವರ ಹೊದಿಕೆಗೆ ಬೆಂಕಿ ಬಿದ್ದ ಪರಿಣಾಮ ಅವರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರ ಮುಂದೆ ಕಥೆ ಕಟ್ಟಿದ್ದಾರೆ.
ದಂಪತಿಯ ಶವಗಳ ಮರಣೋತ್ತರ ಪರೀಕ್ಷೆಯ ವೇಳೆ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಬಂದಿದೆ. ಆಸ್ತಿಗಾಗಿ ಇಬ್ಬರು ಮಕ್ಕಳು ದಂಪತಿಯನ್ನು ಕೊಲೆ ಮಾಡಿದ ಇಬ್ಬರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.
PublicNext
21/12/2020 06:24 pm