ಭೋಪಾಲ್: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಐದು ದಿನದಲ್ಲಿ ಎರಡು ಮದುವೆಯಾಗಿ ರಹಸ್ಯ ಬಯಲಾಗುತ್ತಿದ್ದಂತೆ ಪತ್ನಿಯರಿಗೆ ಕೈಕೊಟ್ಟು ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ನವೀನ್ ಪಾಂಚಾಲ್ (26) ಎರಡು ಮದುವೆಯಾದ ಸಾಫ್ಟವೇರ್ ಇಂಜಿನೀಯರ್. ನವೀನ್ ಡಿಸೆಂಬರ್ 2ರಂದು ಖಾಂದ್ವಾ ಮೂಲದ ಪೂಜಾಳನ್ನ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ. ಮೊದಲ ರಾತ್ರಿ ಮುಗಿದ ಬಳಿಕ ಕೆಲಸ ನೆಪ ಹೇಳಿ ಪತ್ನಿಯನ್ನ ತವರಿನಲ್ಲೇ ಬಿಟ್ಟು ಬಂದಿದ್ದ. ಡಿಸೆಂಬರ್ 7ರಂದು ಉಮಾರಿಮೌನ್ ಗಣೇಶಪುರಿ ಕಾಲೋನಿ ನಿವಾಸಿ ನಂದಿನಿ ಜಾಧವ್ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದ. ಈ ವೇಳೆ ಪೂಜಾ ಜೊತೆಗಿನ ಮದುವೆ ಹಾಜರಾಗಿದ್ದ ಕೆಲವರು ನಂದಿನಿ ವಿವಾಹಕ್ಕೂ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆ ಮೇಲೆ ನಂದಿನಿ ಪಕ್ಕ ನಿಂತಿದ್ದ ನವೀನ್ ಕಂಡು ಆಶ್ಚರ್ಯಚಕಿತರಾದ ಅತಿಥಿಗಳು ಫೋಟೋ ಕ್ಲಿಕ್ಕಿಸಿ ಪೂಜಾ ಪೋಷಕರಿಗೆ ಕಳುಹಿಸಿದ್ದರು.
ಎರಡನೇ ಮದುವೆ ರಹಸ್ಯ ಬಯಲಾಗುತ್ತಿದ್ದಂತೆ ನವೀನ್ ತನ್ನ ಸ್ನೇಹಿತರ ಜೊತೆ ಪರಾರಿಯಾಗಿದ್ದಾನೆ. ಪೂಜಾ ಪೋಷಕರು ನವೀನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವೀನ್‌ಗೆ ಬಲೆ ಬೀಸಿದ್ದಾರೆ.
PublicNext
21/12/2020 01:32 pm