ಬೆಂಗಳೂರು: ಮೂವಿಯಲ್ಲಿ ಚಾನ್ಸ್ ಕೊಡಿಸ್ತೀನಿ ಎಂದು ಯುವತಿಯರನ್ನು ನಂಬಿಸಿ ವಂಚಿಸುತ್ತಿದ್ದ ಹೆಣ್ಣುಬಾಕ ಪತಿಯ ರಾಸಲೀಲೆ ವೃತ್ತಾಂತವನ್ನು ಆತನ ಪತ್ನಿಯೇ ಬಿಚ್ಚಿಟ್ಟಿದ್ದಾರೆ.
ಮಲಯಾಳಂ ಸಿನಿಮಾ ನಿರ್ಮಾಪಕ, ‘ಮಲ್ಲು ಪ್ರೊಡ್ಯೂಸರ್’ ದಿನಕರ್ ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸುಂದರ ಯುವತಿಯರ ಸ್ನೇಹ ಬೆಳೆಸುತ್ತಿದ್ದ. ಬಳಿಕ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ, ತಾನು ಸಿನಿಮಾ ಪ್ರೊಡ್ಯೂಸರ್ ನನ್ನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡ್ತೀನಿ ಎಂದು ನಂಬಿಸುತ್ತಿದ್ದ. ಈ ಮೂಲಕ ಅವರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್ಗಳನ್ನ ಕಳುಹಿಸುತ್ತಿದ್ದ. ಅಷ್ಟೇ ಅಲ್ಲದೆ ಕಾಮುಕ ಮಂಚಕ್ಕೆ ಬನ್ನಿ ಅಂತ ಕರೆಯುತ್ತಿದ್ದ ಎಂದು ಆತನ ಪತ್ನಿ, ಸಿನಿಮಾ ನಿರ್ದೇಶಕಿ ಹಾಗೂ ಫಿಲ್ಮಿ ಫ್ಯಾಷನ್ ಡಿಸೈನರ್ ಆಗಿರುವ ರೋಷಿಣಿ ದೂರಿದ್ದಾರೆ.
ಮಹಿಳೆ ಜತೆಗಿನ ರಾಸಲೀಲೆಯ ವಿಡಿಯೋವನ್ನೂ ಪತಿ ದಿನಕರ್ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ. ಈ ವಿಡಿಯೋ ಬಗ್ಗೆ ಸಂತ್ರಸ್ತ ಮಹಿಳೆ ರೇಖಾ ಎಂಬಾಕೆ ನನಗೆ ತಿಳಿಸಿದ್ದರು. ನಿನ್ನ ಪತಿಯಿಂದ ಕಿರುಕುಳ ಜಾಸ್ತಿ ಆಗಿದೆ ಎಂದು ಅಳಲು ತೋಡಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸೆಪ್ಟೆಂಬರ್ನಲ್ಲಿ ಮನೆ ಬಿಟ್ಟು ಹೋದವನು ಇದುವರೆಗೂ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿಲ್ಲ ಎಂದು ರೋಷಿಣಿ ಹೇಳಿದ್ದಾರೆ.
ನಾನು ಮತ್ತು ಸಂತ್ರಸ್ತೆ ರೇಖಾ ದೂರು ಕೊಟ್ಟು ನಾಲ್ಕು ತಿಂಗಳುಗಳೇ ಕಳೆದಿದೆ. ಪಾಪಿ, ಕಾಮುಕ ಪತಿಯನ್ನ ಪೊಲೀಸರು ಇನ್ನೂ ಪತ್ತೆಹಚ್ಚಿಲ್ಲ. ಯಾಕೆ ಆತನ್ನು ಬಂಧಿಸಿಲ್ಲ ಎಂದು ರೋಷಿಣಿ ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದ್ದಾರೆ.
PublicNext
20/12/2020 04:54 pm