ಗುರುಗ್ರಾಮ್: ಇಬ್ಬರು ಸಂಬಂಧಿಕರ ಚಿಕಿತ್ಸೆ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ ವ್ಯಕ್ತಿಯೊಬ್ಬ ಕೋಪದಲ್ಲಿ 8 ಬಾರಿ ಡಿಕ್ಕಿ ಹೊಡೆದು ಫಾರ್ಮಸಿಯೊಳಗೆ ವಾಹನ ನುಗ್ಗಿಸಿದ ಘಟನೆ ಹರ್ಯಾಣದ ಗುರುಗ್ರಾಮ್‌ದಲ್ಲಿ ನಡೆದಿದೆ.
ಗುರುಗ್ರಾಮ್‌ನ ಬಸಾಯಿ ಚೌಕ್‌ನಲ್ಲಿರುವ ಬಾಲಾಜಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯು ಇಬ್ಬರು ಸಂಬಂಧಿಕರನ್ನು ಬಾಲಾಜಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಅಲ್ಲಿನ ವೈದ್ಯಕೀಯ ಸಿಬ್ಬಂದಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಈ ವೇಳೆ ಕೋಪಗೊಂಡ ಆತ ತನ್ನ ಪಿಕ್-ಅಪ್ ಟ್ರಕ್ ಅನ್ನು ವೇಗವಾಗಿ ಚಾಲನೆ ಮಾಡಿ ಫಾರ್ಮಸಿಗೆ ನುಗ್ಗಿಸಿದ್ದಾನೆ.
ಘಟನೆಯಲ್ಲಿ ಫಾರ್ಮಿಸಿ ಹಾಗೂ 10ರಿಂದ 15 ವಾಹನಗಳು ಹಾನಿಗೊಳಗಾಗಿವೆ. ಈ ಸಂಬಂಧ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಸ್ಥಳಕ್ಕೆ ಬಂದ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಬಾಲಾಜಿ ಆಸ್ಪತ್ರೆಯ ನಿರ್ದೇಶಕ ಡಾ. ಬಲ್ವಾನ್ ಸಿಂಗ್ ಹೇಳಿದ್ದಾರೆ.
PublicNext
20/12/2020 03:59 pm