ಮುಂಬೈ: ಮುಂಬೈನಲ್ಲಿ ವಾಸಿಸುತ್ತಿರುವ 900ಕ್ಕೂ ಹೆಚ್ಚು ಜನರು ಈ ವರ್ಷದ ಜನವರಿ ಮತ್ತು ನವೆಂಬರ್ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈ ಪೊಲೀಸರು ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಈ ವರ್ಷ ಆತ್ಮಹತ್ಯೆಗಳ ಸಂಖ್ಯೆ ಶೇಕಡಾ 14ರಷ್ಟು ಕಡಿಮೆಯಾಗಿದೆ.
ಮಾಹಿತಿಯ ಪ್ರಕಾರ, ಆತ್ಮಹತ್ಯೆಗೆ ಶರಣಾದವರ ಪೈಕಿ 19ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಶೇಕಡಾ 10ರಷ್ಟು ಜನರು ಹಿರಿಯ ನಾಗರಿಕರಿದ್ದಾರೆ. ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಿದ ವೇಳೆ 371 ಜನರು ತೀವ್ರ ಹೆಜ್ಜೆ ಇಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ. ಆದಾಗ್ಯೂ ಈ ವರ್ಷ 928 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಳೆದ ವರ್ಷ 1,075 ಜನ ಆತ್ಮಹತ್ಯೆಗೆ ಶರಣಾಗಿದ್ದರು.
PublicNext
19/12/2020 06:33 pm