ಬೆಂಗಳೂರು: ಅಸ್ಸಾಂ ಮೂಲದ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರೆಹಮಾನ್ ಬಂಧಿತ ಆರೋಪಿ. ಆದರೆ ವಿಚಾರಣೆ ವೇಳೆ ರೆಹಮಾನ್, ಸೆಕ್ಸ್ ವೇಳೆ ಆಕೆ ಮೂರ್ಛೆ ಹೋದಳು. ನಾನು ಆಕೆಯನ್ನ ಕೊಲೆ ಮಾಡಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಆಗಿದ್ದೇನು?:
ಅಸ್ಸಾಂ ಮೂಲದ ವಿದ್ಯಾರ್ಥಿನಿ ಮತ್ತು ಆರೋಪಿ ರೆಹಮಾನಿಗೂ ಸ್ನೇಹವಿತ್ತು. ಹಾಗೆ ಎರಡೂ ಕುಟುಂಬಗಳ ಒಡನಾಟವಿತ್ತು. ಕಳೆದ ಒಂದೂವರೆ ವರ್ಷದಿಂದ ರೆಹಮಾನ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ. ರೆಹಮಾನ್ ಮೂಲಕವೇ ವಿದ್ಯಾರ್ಥಿನಿ ನರ್ಸಿಂಗ್ ವಿದ್ಯಾಭ್ಯಾಸಕ್ಕಾಗಿ ದೂರದ ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದಳು. ರೆಹಮಾನ್ ಜೊತೆ ಸೇರಿ ಕಾಲೇಜು ಅಡ್ಮಿಶನ್ ಮಾಡಿ, ಒಂದು ದಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಬುಧವಾರ ಶಾಪಿಂಗ್‌ಗಾಗಿ ರೆಹಮಾನ್ ಕರೆದೊಯ್ಯಲು ಆತ ವಾಸವಿದ್ದ ಕೊಠಡಿಗೆ ಬಂದಿದ್ದಳು. ಈ ವೇಳೆ ವಿದ್ಯಾರ್ಥಿನಿಯನ್ನ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
PublicNext
17/12/2020 04:18 pm