ಬೆಂಗಳೂರು: ತಾನು ಆರ್‌ಎಸ್‌ಎಸ್ ಮುಖಂಡನೆಂದು ಜನರನ್ನು ವಂಚಿಸಿ ಕೋಟ್ಯಂತರ ಹಣ ಪೀಕಿದ್ದ ಆರೋಪಿ ಯುವರಾಜ್ ಅಲಿಯಾಸ್ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲೇ ಬೀಡು ಬಿಡುತ್ತಿದ್ದ ಯುವರಾಜ್ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದ. ಈ ಮೂಲಕ ತನಗೆ ಬಿಜೆಪಿ ಹೈಕಮಾಂಡ್ ನಾಯಕರು ತುಂಬಾ ಕ್ಲೋಸ್ ಎಂದು ಹೇಳಿಕೊಳ್ಳುತ್ತಿದ್ದ. ಈ ಮೂಲಕ ಉದ್ಯೋಗ ಕೊಡಿಸುವುದಾಗಿ ಜನರನ್ನು ನಂಬಿಸಿ ಹಣ ಪೀಕುತ್ತಿದ್ದ. ಇದೇ ವಂಚನೆಯ ಹಿನ್ನೆಲೆಯಲ್ಲಿ ಯುವರಾಜ್ ಮನೆಯ ಮೇಲೆ ಸಿಸಿಬಿ ರೈಡ್ ಮಾಡಿದೆ. ಬಳಿಕ ಸಿಸಿಬಿ ಪೊಲೀಸರು ಯುವರಾಜ್‌ನನ್ನು ಬಂಧಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ''ಆರೋಪಿ ಯುವರಾಜ್ ಅನೇಕರಿಗೆ ವಿವಿಧ ರೀತಿಯಲ್ಲಿ ನಂಬಿಸಿ ವಂಚಿಸಿದ್ದರ ಬಗ್ಗೆ ದೂರುಗಳು ಬಂದಿತ್ತು. ಈ ದೂರಿನ ಆಧಾರದ ಮೇಲೆ ಇಂದು ವಾರಂಟ್ ಪಡೆದು ಆತನ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ'' ಎಂದು ತಿಳಿಸಿದ್ದಾರೆ.
PublicNext
16/12/2020 04:47 pm