ಜೈಪುರ: ಕಾಮಾಂಧರಿಗೆ ಕಾಮುಕ ಹಾಕಲು ಎಷ್ಟೆಲ್ಲ ಕಟ್ಟು ನಿಟ್ಟಿನ ಕಾನೂನಿನ ಕ್ರಮಗಳಿದ್ದರು ಯಾರಿಗೂ ಆ ಕಾನೂನಿನ ಭಯವೇ ಇಲ್ಲದಾಗಿದೆ.
ಇಲ್ಲೊಬ್ಬ ಕಾಮುಕ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ವಾರ್ಡಿನ ಕೌನ್ಸಿಲರ್ ಎನಿಸಿಕೊಂಡವನೇ ಆಕೆಯ ನಗ್ನ ವಿಡಿಯೋ ಶೂಟ್ ಮಾಡಿ, ಬ್ಲಾಕ್ ಮೇಲ್ ಮಾಡಿ, ರೇಪ್ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಇದೀಗ ಕೌನ್ಸಿಲರ್ ಮತ್ತು ಅವನ ಸ್ನೇಹಿತನ ಮೇಲೆ ದೂರು ದಾಖಲಾಗಿದೆ.
ದೂರು ನೀಡಿರುವ ಮಹಿಳೆ ನಾಲ್ಕು ವರ್ಷದ ಹಿಂದೆ ಬಾಲ್ಟೋರಾ ಜಿಲ್ಲೆಗೆ ಮದುವೆಯಾಗಿ ಬಂದಿದ್ದರು.
ಆ ಮನೆಯವರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಅಲ್ಲಿನ ಕೌನ್ಸಿಲರ್ ಕಾಂತಿಲಾಲ್ ಆಗಾಗ ಅವರ ಮನೆಗೆ ಬಂದುಹೋಗುತ್ತಿದ್ದನಂತೆ.
ಹೀಗೆ ಒಂದು ದಿನ ಮನೆಗೆ ಬಂದ ಕಾಂತಿಲಾಲ್, ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಿದ್ದಾನೆ.
ನಂತರ ಆ ವಿಡಿಯೋವನ್ನು ಮಹಿಳೆಗೆ ತೋರಿಸಿ, ರೇಪ್ ಮಾಡಿದ್ದಾನೆ.
ವಿಡಿಯೋ ಲೀಕ್ ಮಾಡುವ ಭಯ ತೋರಿಸಿ ತಾನು ಹಾಗೂ ತನ್ನ ಸ್ನೇಹಿತನೊಂದಿಗೆ ಮಲಗು ಎಂದು ಮಹಿಳೆಗೆ ಒತ್ತಾಯಿಸಿದ್ದಾನೆ.
ಹಲವು ಬಾರಿ ಬ್ಲಾಕ್ ಮೇಲ್ ಮಾಡಿ ರೇಪ್ ಮಾಡಿದ್ದರಿಂದ ನೊಂದಿದ್ದ ಮಹಿಳೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಕೌನ್ಸಿಲರ್ ಕಾಂತಿಲಾಲ್ ಮತ್ತು ಆತನ ಸ್ನೇಹಿತ ಜೋಧರಾಂ ವಿರುದ್ಧ ದೂರು ದಾಖಲಿಸಲಾಗಿದೆ.
PublicNext
08/12/2020 03:56 pm