ಮಾಸ್ಕೋ: ಗರ್ಭಿಣಿಯಾಗಿದ್ದ ತನ್ನ ಗೆಳತಿಯನ್ನು ಕೊರೆವ ಚಳಿಯಲ್ಲಿ ನಿಲ್ಲಿಸಿದ ಗೆಳೆಯ ಅದನ್ನು ಯೂಟ್ಯೂಬ್ ಲೈವ್ ಸ್ಟ್ರೀಮ್ ಹರಿಬಿಟ್ಟಿದ್ದಾನೆ. ಆದರೆ ಚಳಿಗೆ ತಾಳದ ಗರ್ಭಿಣಿ ಗೆಳತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಇದು ಲೈವ್ ಸ್ಟ್ರೀಮ್ ಮೂಲಕ ದಾಖಲಾಗಿದ್ದು ದುಸ್ಸಾಹಸ ಮಾಡಲು ಹೋಗಿ ಆಕೆಯ ಸಾವಿಗೆ ಕಾರಣನಾದ ಗೆಳೆಯನಿಗೆ 2ವರ್ಷ ಜೈಲು ಶಿಕ್ಷೆಯಾಗುವ ಎಲ್ಲ ಸಾಧ್ಯತೆ ಇದೆ. ಈ ಘಟನೆ ರಷ್ಯಾದ ಮಾಸ್ಕೋದಲ್ಲಿ ನಡೆದಿದೆ.
28 ವರ್ಷದ ವೆಲಿಂಟನಾ ಗ್ರಿಗೊರ್ಯೆವಾ ಉಫ್ ವಲ್ಯಾ ಮೃತ ಗರ್ಭಿಣಿ. 30 ವರ್ಷದ ಯುಟ್ಯೂಬರ್ ಸ್ಟಾಸ್ ರಿಫ್ಲೈ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮೈನಸ್ ಡಿಗ್ರಿ ಚಳಿಯಲ್ಲಿ ಗೆಳತಿಯನ್ನ ಲೈವ್ ಸ್ಟ್ರೀಮ್ ಗಾಗಿ ಬಿಕಿನಿಯಲ್ಲಿ ಮನೆಯಿಂದ ಹೊರಗೆ ನಿಲ್ಲಿಸಿದ್ದಾನೆ. ತೀವ್ರ ಚಳಿಯಿಂದಾಗಿ ವೆಲಿಂಟಿನಾ ಪ್ರಾಣ ಬಿಟ್ಟಿದ್ದಾಳೆ.
ಸ್ಥಳಕ್ಕಾಗಮಿಸಿದ ಆರೋಗ್ಯಾಧಿಕಾರಿಗಳು ವೆಲಿಂಟಿನಾ ಹೈಫೋಥರ್ಮಿಯಾ (ಅತಿಯಾದ ಚಳಿಯಿಂದ) ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ. ಇನ್ನು ನೇರ ಪ್ರಸಾರ ವೀಕ್ಷಿಸುತ್ತಿದ್ದ ನೆಟ್ಟಿಗರು, ಅತಿ ಭಯಾನಕ ಕೊಲೆ. ಲೈಕ್ಸ್ ಮತ್ತು ವ್ಯೂವ್ ಗಳಿಗಾಗಿ ಇಷ್ಟು ಕ್ರೂರವಾಗಿ ನಡೆದುಕೊಳ್ಳುವುದು ತಪ್ಪ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸ್ಟಾಸ್ ರಿಫ್ಲೈ ಖಾತೆಯನ್ನ ಯುಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.
PublicNext
07/12/2020 07:39 pm