ನವದೆಹಲಿ: ಪೂರ್ವ ದೆಹಲಿಯ ಶಾಕಾರ್ಪುರ್ ಪ್ರದೇಶದಲ್ಲಿ ಸೋಮವಾರ ನಡೆದ ಎನ್‌ಕೌಂಟರ್ ಬಳಿಕ ಐವರನ್ನು ಪೊಲೀಸರು ಬಂಧಿಸಿದ್ದು, ಶಂಕಿತರ ಬಳಿ ಇದ್ದ ಶಸ್ತ್ರಾಸ್ತ್ರ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬಂಧಿತರಲ್ಲಿ ಮೂವರು ಕಾಶ್ಮೀರದವರು ಶಬ್ಬೀರ್ ಅಹ್ಮದ್, ಅಯೂಬ್ ಪಠಾಣ್, ರಿಯಾಜ್ ಹಾಗೂ ಇಬ್ಬರು ಪಂಜಾಬ್ ಮೂಲದ ಗುರ್ಜೀತ್ ಸಿಂಗ್, ಸುಖ್ದೀಪ್ ಸಿಂಗ್ನವರು ಎಂದು ಗುರುತಿಸಲಾಗಿದೆ. ಆದರೆ ಉಗ್ರ ಸಂಘಟನೆಯ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಆರೋಪಿಗಳನ್ನು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
PublicNext
07/12/2020 01:01 pm