ಮುಂಬೈ: 22 ಲಕ್ಷ ಮೌಲ್ಯದ ಕೊಕೇನ್ ಮಾದಕ ಪದಾರ್ಥವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳಾದ ಮೂವರು ನೈಜೀರಿಯನ್ ಮೂಲದವರನ್ನು ಬಂಧಿಸಿದ್ದಾರೆ.
ಕೊಕೇನ್ ಸಾಗಾಟ ಮಾಡುತ್ತಿದ್ದ ಮೂವರು ನೈಜೀರಿಯಾ ಮೂಲದ ವ್ಯಕ್ತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಬಂಗೂರ್ ಪೊಲೀಸ್ ವಲಯದ ವಿಶೇಷ ಆಯುಕ್ತರು ಈ ಮೂವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಇವರಿಂದ ಕಳೆದ 24 ಗಂಟೆಗಳಲ್ಲಿ 22 ಲಕ್ಷ ರೂ.ಗಳ ಮೌಲ್ಯದ ಸುಮಾರು 220 ಗ್ರಾಂ ಕೊಕೇನ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಚೆ ಜೇಮ್ಸ್ (38) ಮಲಾಡ್‍ದ ಲಿಂಕ್ ರಸ್ತೆಯಲ್ಲಿ ಮಾದಕ ವಸ್ತುಗಳನ್ನು ತಲುಪಿಸಲು ಬರುತ್ತಿದ್ದಾನೆ ಎಂದು ಮೊದಲೇ ನಮಗೆ ಮಾಹಿತಿ ಸಿಕ್ಕಿತ್ತು. ನಾವು ಸ್ಥಳಕ್ಕೆ ಹೋದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಜೇಮ್ಸ್ ನೀಡಿದ ಮಾಹಿತಿಯ ಆಧಾರದ ಮೇಲೆ ಇತರ ಇಬ್ಬರು ಆರೋಪಿಗಳಾದ ಎಮೆಕಾ ಸಿಪ್ರಿಯನ್ ಮತ್ತು ಚುಕ್ವು ಜೋಸೆಫ್ ಎಂಬಾತನನ್ನು ಗೋರೆಗಾಂವ್ ಕಾಲೋನಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
04/12/2020 10:13 am