ತುಮಕೂರು: ರೌಡಿ ಶೀಟರ್ ಒಬ್ಬನನ್ನ ರೌಡಿಗಳ ಗುಂಪು ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದೆ. ನಿನ್ನೆ ರಾತ್ರಿ ನಗರದ ನಡುಬೀದಿಯಲ್ಲಿ ಈ ಘಟನೆ ನಡೆದಿದ್ದು ಕೊಲೆಗೈದ ಆರೋಪಿಗಳು ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮಂಜು ಅಲಿಯಾಸ್ ಆರ್ ಎಕ್ಸ್ ಮಂಜ (31) ಎಂಬಾತನೇ ಕೊಲೆಯಾದ ರೌಡಿಶೀಟರ್. ರಾತ್ರಿ ಸ್ನೇಹಿತರ ಜೊತೆ ಮಾತನಾಡಿ ಮನೆಗೆ ಹೋಗುವಾಗ 9.45ರ ಸುಮಾರಿನಲ್ಲಿ ಕೃತ್ಯ ನಡೆದಿದೆ.
ನಾಲ್ಕೈದು ರೌಡಿಗಳು ಬಂದು ಮಂಜು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿರುವ ರೌಡಿಗಳು ಯಾರೆಂದು ತಿಳಿದುಬಂದಿಲ್ಲ.
ಸ್ಥಳಕ್ಕೆ ಎನ್ ಇಪಿಎಸ್ ಪೊಲೀಸರು ದೌಡಾಯಿಸಿದ್ದು, ಎನ್‍ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
PublicNext
03/12/2020 09:32 am