ಗೋ ಹತ್ಯೆ ಮಹಾಪಾಪ ಅಂತಾರೆ. ಆದ್ರೆ ಅದು ನಿಲ್ಲುತ್ತಲೇ ಇಲ್ಲ ಮನುಷ್ಯರಿಗಾಗಿ ಜೀವ ತೇಯ್ದ ಬಹುತೇಕ ಹಸುಗಳು ಇದೇ ರೀತಿ ಪ್ರಾಣ ಬಿಡುತ್ತಿವೆ. ಹೀಗೆ ವಾಹನದ ಹಿಂದೆ ಹಗ್ಗ ಕಟ್ಟಿ ಹಸುಗಳನ್ನ ರಸ್ತೆಯುದ್ದಕ್ಕೂ ದರ ದರ ಎಳೆದುಕೊಂಡು ಹೋಗಲಾಗ್ತಾ ಇದೆ.
ಈ ವಿಡಿಯೋ ಟ್ವೀಟ್ ಮಂದಿಯ ಕೆಂಗಣ್ಣಿಗೆ ಕಾರಣವಾಗಿದೆ. ವಧಾಲಯಕ್ಕೆ ಸಾಗಿಸಲಾಗುತ್ತಿರುವ ಹಸುಗಳನ್ನು ತೀರಾ ಅಮಾನವೀಯ ರೀತಿಯಲ್ಲಿ ಎಳೆದಾಡಿಕೊಂಡು ಹೋಗುತ್ತಿರುವವರಿಗೆ ನಿಜಕ್ಕೂ ಮನುಷ್ಯತ್ವ ಇದೆನಾ? ಎಂದು ನೆಟ್ಟಿಗರು ಆಕ್ರೋಶಿತರಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ ಹಿಂಸೆಗೆ ಯಾವಾಗ ಕೊನೆ? ಎಂದು ನೋವಿನಿಂದ ಕೇಳುತ್ತಿದ್ದಾರೆ.
PublicNext
01/12/2020 10:14 am