ತಿರುವನಂತಪುರಂ: ತಂದೆಯೊಂದಿಗೆ ಠಾಣೆಗೆ ಬಂದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ ಓರ್ವ ಎಸ್‌ಐ ಅಮಾನತುಗೊಂಡ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರಂನ ನೆಯ್ಯಡ್ರಾಮ್ ಠಾಣೆಯ ಎಸ್‌ಐ ಗೋಪಕುಮಾರ್ ಎಂದು ಗುರುತಿಸಲಾಗಿದೆ. ನವೆಂಬರ್ 24ರಂದು ಘಟನೆ ನಡೆದಿದ್ದು, ಗ್ರೇಡ್ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಗೋಪಕುಮಾರ್‌ನನ್ನು ಶನಿವಾರ ಅಮಾನತುಗೊಳಿಸಿ, ತನಿಖೆಗೆ ಆದೇಶ ಹೊರಡಿಸಲಾಗಿದೆ.
ತಿರುವನಂತಪುರಂ ನಿವಾಸಿ ಸುದೇವನ್ ಅವರ ಪುತ್ರಿಯೊಬ್ಬಳು ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಮತ್ತೊಬ್ಬ ಮಗಳ ಜೊತೆ ದೂರು ನೀಡಲು ಠಾಣೆಗೆ ಹೋಗಿದ್ದರು. ಈ ವೇಳೆ ಎಸ್‍ಐ ಗೋಪಕುಮಾರ್ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಲ್ಲದೇ ವಾಗ್ವಾದಕ್ಕೆ ಇಳಿದಿದ್ದರು. ಗಲಾಟೆ ತಾರಕಕ್ಕೇರಿ ಅಧಿಕಾರಿ ಸುದೇವನ್ ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ದೃಶ್ಯವನ್ನು ಸುದೇವನ್ ಅವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
PublicNext
30/11/2020 05:11 pm