ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

B.L ಸಂತೋಷ್ ಹೆಸರಲ್ಲಿ ನಕಲಿ FB account : ಹಣಕ್ಕಾಗಿ ಡಿಮ್ಯಾಂಡ್!

ಬೆಂಗಳೂರು: ತಂತ್ರಜ್ಞಾನ ಬಳಸಿಕೊಂಡ ಕಿಡಿಗೇಡಿಗಳು ಮೋಸ ಮಾಡಲು ಮುಂದಾಗುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಸದ್ಯ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ಕಿಡಿಗೇಡಿಗಳು ಹಣಕ್ಕಾಗಿ ಬೇಡಿಕೆ ಇಡಿರುವ ಘಟನೆ ಬೆಳಕಿಗೆ ಬಂದಿದೆ.

"ನನ್ನ ಹೆಸರಿನಲ್ಲಿ ನಕಲಿ ಖಾತೆ ಅಥವಾ ಕ್ಲೋನ್ ಖಾತೆಯನ್ನು ರಚಿಸಲಾಗಿದೆ. ಅನೇಕ ಜನರು ಸ್ನೇಹಿತರ ವಿನಂತಿಗಳನ್ನು ಪಡೆಯುತ್ತಿದ್ದಾರೆ.

ದಯವಿಟ್ಟು ಹುಷಾರಾಗಿರಿ" ಎಂದು ಸ್ವತಃ ಸಂತೋಷ್ ಅವರೇ ತಮ್ಮ ದೃಢೀಕೃತ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸಂತೋಷ್ ಹೆಸರಿನ ಈ ನಕಲಿ ಖಾತೆಯಲ್ಲಿ ಡಿಸ್ ಪ್ಲೇ ಇಮೇಜ್ ಆಗಿ ಸಂತೋಷ್ ಅವರ ಚಿತ್ರವನ್ನೇ ಬಳಸಿಕೊಳ್ಳಲಾಗಿದೆ.

ಅಸಲಿ ಖಾತೆಯಂತೆಯೇ ಕಾಣುವ ಈ ಖಾತೆಯ ಮೂಲಕ ಅವರ ಸ್ನೇಹಿತರಿಗೆ ಕಿಡಿಗೇಡಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ. "ನನಗೆ ತುರ್ತಾಗಿ ಹದಿನೈದು ಸಾವಿರ ಹಣ ಬೇಕಿದೆ.

ಎರಡೇ ತಾಸಿನಲ್ಲಿ ಹಿಂದಿರುಗಿಸುತ್ತೇನೆ ಎಂದು ಮೆಸೆಂಜರ್ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

30/11/2020 03:29 pm

Cinque Terre

53.27 K

Cinque Terre

1

ಸಂಬಂಧಿತ ಸುದ್ದಿ