ನೆಲಮಂಗಲ: ಕೈಗೆ ಹಚ್ಚಿದ ಮದರಂಗಿ ಮಾಸುವ ಮುನ್ನ ಆ ಸುಂದರ ಯುವತಿ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ.
ಆಕೆ ಎಂಬಿಎ ಓದಿಕೊಂಡಿದ್ದ ಚೆಲುವೆ ಸಾವಿರಾರು ಕನಸು ಹೊತ್ತು ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಳು.
ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರೆಬೇಕಿದ್ದ ಆ ಯುವತಿ ಅನುಮಾನಾಸ್ಪದವಾಗಿ ಸಾವಿನ ಮನೆ ಸೇರಿದ್ದಾಳೆ.
ಬೆಂಗಳೂರು ಉತ್ತರ ತಾಲೂಕಿನ ಕದುರುಗೆರೆ ನಿವಾಸಿ 23 ವರ್ಷದ ರೇಖಾ, ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದ ಈ ಯುವತಿ ಕುಣಿಕೆಗೆ ಕೊರೊಳೊಡ್ಡಿದ್ದಾಳೆ.
ರೇಖಾಳಿಗೆ ಎರಡು ದಿನಗಳ ಹಿಂದೆ ನೆಲಮಂಗಲದ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ನಂತರ ಇಬ್ಬರು ಅನ್ಯೋನ್ಯವಾಗಿಯೇ ಮಾತನಾಡುತ್ತಿದ್ದರು.
ಆದ್ರೆ ಅದೇನಾಯ್ತೋ ಏನೋ ನಿನ್ನೆ ಮಧ್ಯಾಹ್ನನದ ವೇಳೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನು ಆತ್ಮಹತ್ಯೆ ಹಿಂದೆ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಹುಡುಗ ಹುಡುಗಿಯ ನಡುವೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ಆದ್ರೆ ಹೊಟ್ಟೆ ನೋವಿನಿಂದ ನೇಣಿಗೆ ಶರಣಾಗಿದ್ದಾಳೆಂದು ಯುವತಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
PublicNext
29/11/2020 08:47 am