ಗುರುಗ್ರಾಮ: ಎಂಟು ತಿಂಗಳಲ್ಲಿ ಎಂಟು ಜನರನ್ನ ಕೊಲೆಗೈದಿದ್ದ ಶಾರ್ಪ್ ಶೂಟರ್ ಮತ್ತು ಆತನ ತಂಡವನ್ನು ಬಂಧಿಸುವಲ್ಲಿ ಗುರುಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಶಾರ್ಫ್ ಶೂಟರ್ ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಅಪರಾಧ ಕೃತ್ಯ ನಡೆಸುತ್ತಿದ್ದನು.
ಪವನ್ ನೆಹ್ರಾ ಬಂಧಿತ ಶಾರ್ಫ್ ಶೂಟರ್. ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಶ್ನೋಯಿಗಾಗಿ ಪವನ್ ಕೆಲಸ ಮಾಡುತ್ತಿದ್ದನು. ಉತ್ತರಾಖಂಡದ ಉಧಮ್ ನಗರದಲ್ಲಿ ಪವನ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಮುಂದೆ ದೊಡ್ಡ ಪ್ಲಾನ್ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಬಂಧಿತ ಪವನ್ ನೆಹ್ರಾ ಎಂಟು ತಿಂಗಳಲ್ಲಿ ಎಂಟು ಜನರನ್ನ ಕೊಲೆಗೈದಿದ್ದಾನೆ. ಬಂಧನದ ಬಳಿಕ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆಗಸ್ಟ್ 20ರಂದು ಗುರುಗ್ರಾಮದ 3ನೇ ಸೆಕ್ಟೆರ್ ಮೂವರ ಯುವಕರಿಗೆ ಗುಂಡಿಟ್ಟು ಕೊಂದು ಎಸ್ಕೇಪ್ ಆಗಿದ್ದನು ಎಂದು ಎಸ್.ಪಿ. ಪ್ರೀತ್‍ಪಾಲ್ ಸಿಂಗ್ ಹೇಳಿದ್ದಾರೆ.
PublicNext
26/11/2020 02:51 pm