ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ತೆಯಾದ 3ಕೋಟಿ ಬೆಲೆಯ ಚಿನ್ನಕ್ಕೆ ವಾರಸುದಾರರೇ ಇಲ್ಲ!

ಬೆಂಗಳೂರು: ಸಿಟಿ ಮಾರುಕಟ್ಟೆ ವ್ಯಾಪ್ತಿಯ ದೊಡ್ಡಪೇಟೆ ವೃತ್ತದಲ್ಲಿ ಸಾಗಣೆ ವೇಳೆ ಜಪ್ತಿ ಮಾಡಲಾದ 3 ಕೋಟಿ ರೂ. ಮೌಲ್ಯದ 6 ಕೆ.ಜಿ. 55 ಗ್ರಾಂ ಚಿನ್ನಾಭರಣಗಳನ್ನು ಕ್ಲೇಮ್‌ ಮಾಡಿಕೊಳ್ಳಲು ನಾಲ್ಕು ದಿನಗಳು ಕಳೆದರೂ ಯಾರೊಬ್ಬರೂ ಮುಂದೆ ಬಂದಿಲ್ಲ.

ಚಿನ್ನಾಭರಣ ಕ್ಲೇಮ್‌ ಮಾಡಿಕೊಳ್ಳಲು ಬಂದರೆ ಅದಕ್ಕೆ ಸಂಬಂಧಿಸಿದ ತೆರಿಗೆ ಸಹಿತ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ದಾಖಲೆಗಳನ್ನು ತೋರಿಸದೆ ಇದ್ದಲ್ಲಿ ಪೊಲೀಸರು, ತೆರಿಗೆ ಇಲಾಖೆ, ಜಿಎಸ್‌ಟಿ ವಿಭಾಗಗಳಿಗೆ ಸಿಕ್ಕಿ ಬೀಳುವ ಭೀತಿಯಿಂದ ಸಂಬಂಧಪಟ್ಟವರು ಚಿನ್ನ ಕ್ಲೇಮ್‌ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಮತ್ತೊಂದೆಡೆ ಚಿನ್ನ ಸಾಗಿಸುತ್ತಿದ್ದ ದಲ್ಪತ್‌ ಸಿಂಗ್‌ ಮತ್ತು ವಿಕಾಸ್‌ ಎಂಬುವವರಿಗೆ ಜಾಮೀನು ದೊರಕಿದೆ.

ಜಪ್ತಿ ಮಾಡಲಾದ ಈ ಚಿನ್ನಾಭರಣಗಳ ಕುರಿತು ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಯಾವುದೇ ಮಾಲೀಕರು ಕ್ಲೇಮ್‌ ಮಾಡಿಕೊಂಡು ಮುಂದೆ ಬಂದರೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆಭರಣಗಳನ್ನು ಕ್ಲೇಮ್‌ ಮಾಡಿಕೊಳ್ಳಬಹುದು. ಮಾಲೀಕ ಎಂದು ಶಂಕಿಸಲಾದ ಮುಂಬೈ ಮೂಲದ ಚಿನ್ನದ ವ್ಯಾಪಾರಿ ಕೂಡ ಈವರೆಗೆ ದಾಖಲೆಗಳನ್ನು ತೋರಿಸುವ ಪ್ರಯತ್ನ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

25/11/2020 10:09 am

Cinque Terre

108.85 K

Cinque Terre

9