ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾನ್ ಮಸಾಲಾ ದರೋಡೆ: ಕೆಲವೇ ಗಂಟೆಗಳಲ್ಲಿ ಆರೋಪಿ ಸೆರೆ

ಚಾಮರಾಜನಗರ: ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಾಲವನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆ. ಕೂಡಲೇ ಫೀಲ್ಡಿಗಿಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣ ಬೇಧಿಸಿದ್ದಾರೆ.

ಚಾಮರಾಜನಗರದ ಪೂರ್ವ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಗಡಿಭಾಗದಲ್ಲಿರುವ ಕೋಳಿಪಾಳ್ಯ ಗ್ರಾಮದಲ್ಲಿ ಬವರಲಾಲ್ ಎಂಬುವವರಿಗೆ ಸೇರಿದ ಗೋದಾಮುಗಳಲ್ಲಿನ ಪಾನ್ ಮಸಾಲಾ ದರೋಡೆ ಮಾಡಲಾಗಿತ್ತು. 12 ಮಂದಿ ಇದ್ದ ತಂಡ ಗೋದಾಮಿನ ಕಾರ್ಮಿಕರನ್ನು ಬೆದರಿಸಿಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಾಲಾವನ್ನು ದೋಚಿತ್ತು.

ದೋಚಿದ್ದ ಪಾನ್ ಮಸಾಲವನ್ನು ಗೂಡ್ಸ್ ವಾಹನಗಳಲ್ಲಿ ಖದೀಮರು ಸಾಗಿಸಿದ್ದರು. ದರೋಡೆಯಾದ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಹರದನಹಳ್ಳಿ ಬಳಿ ಹೊಂಚು ಹಾಕಿ ಪಾನ್ ಮಸಾಲ ಸಾಗಿಸುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ತಿರುಪೂರು ಜಿಲ್ಲೆಯ ಧರ್ಮಪುರಿ ತಾಲೂಕಿನ ಅಬುತಲ್ಲಾ ಎಂಬಾತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಉಳಿದ 11 ಮಂದಿ ಪರಾರಿಯಾಗಿದ್ದಾರೆ.

Edited By : Nagaraj Tulugeri
PublicNext

PublicNext

24/11/2020 08:17 am

Cinque Terre

92.93 K

Cinque Terre

1

ಸಂಬಂಧಿತ ಸುದ್ದಿ