ಕಲಬುರಗಿ: ಗೆಳತಿಯ ಜೊತೆಗೆ ಮಗ ಓಡಿ ಹೋಗಿದ್ದಕ್ಕೆ ಕಲಬುರಗಿ ಮಹಿಳಾ ಠಾಣೆಯ ಪೊಲೀಸರು ಯುವಕನ ತಂದೆ ಹಾಗೂ ತಾಯಿಯನ್ನು ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಳಗಾವಿಯಲ್ಲಿ ಬಿಇಎಂಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿಜಯಪುರದ ಯುವಕ ಅಯ್ಯಪ್ಪಸ್ವಾಮಿ ಕಲಬುರಗಿಯ ಯುವತಿ ಕಸ್ತೂರಿ ಇಬ್ಬರೂ ಪರಸ್ಪರ ಪ್ರೀತಿಸಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಕಲಬುರಗಿ ಮಹಿಳಾ ಠಾಣೆಯ ಪೊಲೀಸರು ಯುವಕ ಅಯ್ಯಪ್ಪ ಸ್ವಾಮಿ ತಂದೆ ತುಕಾರಾಮ್ ಮತ್ತು ತಾಯಿ ಸುಜಾತ ಅವರನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪೊಲೀಸ್ ಠಾಣೆಯಿಂದ ಕರೆಸಿದ್ದರು. ಈ ವೇಳೆ ಅವರನ್ನು ಪೊಲೀಸ್ ಠಾಣೆಯಲ್ಲೇ ಮನ ಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ತುಕಾರಾಮ್ ಕುಡಿಯಲು ನೀರು ಕೇಳಿದ್ದಕ್ಕೆ ಪತ್ನಿಯ ಮೂತ್ರ ಕುಡಿ ಎಂದು ಪೊಲೀಸರು ನಿಂದಿಸಿದ್ದಾರೆ. ಅಲ್ಲದೆ ಯುವಕನ ತಾಯಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಗೊಂಡಿರುವ ಯುವಕನ ಪೋಷಕರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
PublicNext
23/11/2020 08:54 pm