ಬೆಂಗಳೂರು: ಕ್ಯಾಬ್ ಬುಕ್ ಮಾಡಿಕೊಂಡು ಅಜ್ಞಾತ ಸ್ಥಳಗಳಿಗೆ ಕರೆದೊಯ್ದು ಚಾಲಕರನ್ನು ದರೋಡೆ ಮಾಡುವ ಗ್ಯಾಂಗ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಕ್ರೀಯವಾಗಿದೆ. ಹೀಗಾಗಿ ಕ್ಯಾಬ್ ಚಾಲಕರೇ ಎಚ್ಚರವಾಗಿರಿ.
ಈ ಪ್ರಕರಣದ ಸಂಬಂಧ ನಾಲ್ವರನ್ನು ದರೋಡೆಕೋರರನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಮೊಬೈಲ್ ಹಾಗೂ 18 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ನಂದಿನಿ ಲೇಔಟ್‌ನ ಅಭಿಷೇಕ್ (21), ಲಗ್ಗೆರೆಯ ಮುನೇಶ್ವರ ನಗರದ ನಿವಾಸಿ ಆರ್. ರೋಹಿತ್ ಅಲಿಯಾಸ್ ದಡಿಯಾ (19), ಜಾಲಹಳ್ಳಿ ಕ್ರಾಸ್ ನಿವಾಸಿ ಟಿ.ಪುನೀತ್ ಅಲಿಯಾಸ್ ಕಪ್ಪೆ (21), ಲಗ್ಗೆರೆಯ ಮುನೇಶ್ವರಿ ನಗರದ ಅಜಯ್ ಕುಮಾರ್ (20) ಬಂಧಿತರು.
ಆರೋಪಿಗಳು ಕ್ಯಾಬ್ ಬುಕ್ ಮಾಡಿ ಚಾಲಕರನ್ನು ಅಜ್ಞಾತ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. ಬಳಿಕ ಚಾಲಕರಿಗೆ ಚಾಕು ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿ ಅವರಿಂದ ಮೊಬೈಲ್, ಪರ್ಸ್, ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಗೂಗಲ್-ಪೇ, ಫೋನ್-ಪೇ, ಇನ್ನಿತರ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳ ಮೂಲಕ ತಮ್ಮ ಮೊಬೈಲ್‌ಗೆ ಹಣ ಸಂದಾಯ ಮಾಡಿಕೊಳ್ಳುತ್ತಿದ್ದರು.
PublicNext
19/11/2020 08:33 am