ಮುಂಬೈ: ಚಿನ್ನಾಭರಣಗಳ ಬದಲಾವಣೆ ವೇಳೆ ವ್ಯಾಪಾರಿಗೆ ಬರೋಬ್ಬರಿ 180 ಗ್ರಾಂ. ಚಿನ್ನವನ್ನು ಪಂಗನಾಮ ಹಾಕಿರುವ ಘಟನೆ ನಡೆದಿದೆ.
ದಕ್ಷಿಣ ಮುಂಬೈನ ನಾಲ್ ಬಜಾರ್‍ನಲ್ಲಿ ಘಟನೆ ನಡೆದಿದ್ದು, 39 ವರ್ಷದ ಸನಾ ಶೇಖ್ ಎಂಬಾಕೆ ಚಿನ್ನವನ್ನು ಬದಲಾಯಿಸುವ ವೇಳೆ ವ್ಯಾಪಾರಿಗೆ ಕಣ್ಕಟ್ಟು ಕೈಚಳಕ ತೋರಿಸಿದ್ದಾಳೆ. ಬದಲಾವಣೆ ಮಾಡುವ ವೇಳೆ 180 ಗ್ರಾಂ. ನಕಲಿ ಚಿನ್ನದ ಒಡವೆ ನೀಡಿ ವ್ಯಾಪಾರಿಗೆ ಪಂಗನಾಮ ಹಾಕಿದ್ದಾಳೆ.
ಚಿನ್ನಾಭರಣ ಕಾಣದಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ದೀಪಕ್ ರಾಠೋಡ್, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಕಲಿ ಚಿನ್ನಾಭರಣ ನೀಡಿ ಅಸಲಿ ಒಡವೆಗಳನ್ನು ಕೊಂಡೊಯ್ದಿರುವುದು ಪತ್ತೆಯಾಗಿದೆ. ಬಳಿಕ ರಾಠೋಡ್ ಅವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮಹಿಳೆಯ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಕಳ್ಳತನದ ಬಗ್ಗೆ ಮುಂಬೈ ಪೊಲೀಸರ ಆಸ್ತಿ ವಿಭಾಗ ತನಿಖೆ ನಡೆಸಿದ್ದು, ಆರೋಪಿ ಮಹಿಳೆಗಾಗಿ ಬಲೆ ಬೀಸಿ, ಮಹಿಳೆಯನ್ನು ಬಂಧಿಸಿದ್ದಾರೆ. ಕಳೆದ ಕೆಲ ತಿಂಗಳಲ್ಲಿ ಮಹಿಳೆ ಸುಮಾರು ಐದಾರು ಬಾರಿ ಅಂಗಡಿಗೆ ಭೇಟಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಕಳೆದ ತಿಂಗಳು ಮಹಿಳೆ ಅಂಗಡಿಯಿಂದ ಚಿನ್ನಾಭರಣ ಕದ್ದಿದ್ದು, ಸದ್ಯ ಪ್ರಕರಣ ಬೆಳಕಿಗೆ ಬಂದಿದೆ.
PublicNext
16/11/2020 04:23 pm