ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕಾಲ್‌ಗರ್ಲ್‌ಗೆ ಫೋನ್ ಮಾಡಿ 97 ಸಾವಿರ ರೂ. ತೆತ್ತ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ವೈಟ್ಫೀಲ್ಡ್ನ ನಿವಾಸಿ ದಿನೇಶ್ ಹಣ ಕಳೆದುಕೊಂಡ ವ್ಯಕ್ತಿ. ಆತ ನವೆಂಬರ್ 13ರಂದು ವೆಬ್ಸೈಟ್ನಲ್ಲಿ ಕಾಲ್ಗರ್ಲ್ ಬೇಕೆ ಎಂಬ ಜಾಹೀರಾತು ನೋಡಿದ್ದರು. ಅಲ್ಲಿ ಸಿಕ್ಕ ಮೊಬೈಲ್ ನಂಬರ್ಗೆ ಕರೆ ಮಾಡಿದ್ದ ವ್ಯಕ್ತಿಯು ವೇಶ್ಯೆಯನ್ನು ಮನೆಗೆ ಕರೆಸಿಕೊಂಡಿದ್ದ. ಮನೆಗೆ ಬಂದ ಯುವತಿ 10 ಸಾವಿರ ರೂ. ಪಡೆದಿದ್ದಳು.
ಅಷ್ಟಕ್ಕೆ ಸುಮ್ಮನಾಗದ ಯುವತಿ ತನ್ನನ್ನು ಎನ್ಜಿಒ ಅಧಿಕಾರಿ ಎಂದು ಪರಿಚಯಿಸಿಕೊಂಡು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಒಂದು ವೇಳೆ ತಾನು ಕೇಳಿದಷ್ಟು ಹಣ ಕೊಡದಿದ್ದರೆ ಅತ್ಯಾಚಾರ ಮಾಡಿದ್ದಾಗಿ ಪೊಲೀಸರಿಗೆ ದೂರು ಕೊಡುವುದಾಗಿ ಬ್ಲ್ಯಾಕ್ವೆುೕಲ್ ಮಾಡಿದ್ದಳು. ತಕ್ಷಣವೇ ಯುವಕನೊಬ್ಬನಿಗೆ ಕರೆ ಮಾಡಿದ್ದ ವ್ಯಕ್ತಿಗೆ ನೀಡಿದ್ದಳು. ಅವನು ಈಗಲೇ 2 ಲಕ್ಷ ರೂ. ಹಾಕಬೇಕು. ಠಾಣೆ ಮೆಟ್ಟಿಲೇರಿದರೆ 5 ಲಕ್ಷ ರೂ. ಕೊಡಬೇಕಾಗುತ್ತದೆ ಎಂದು ಬೆದರಿಸಿದ್ದ.
ಮಹಿಳೆ ಮೊಬೈಲ್ ತೆಗೆದುಕೊಂಡು ಆನ್ಲೈನ್ ಮೂಲಕ ತನ್ನ ಖಾತೆಗೆ ಹಂತ ಹಂತವಾಗಿ 87 ಸಾವಿರ ರೂ. ಹಾಕಿಸಿಕೊಂಡು ಪರಾರಿಯಾಗಿದ್ದಾಳೆ ಎಂದು ಸಂತ್ರಸ್ಥ ದಿನೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ವೈಟ್ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಗೆ ಬಲೆ ಬೀಸಿದ್ದಾರೆ.
PublicNext
16/11/2020 01:57 pm