ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಡಹಗಲೇ ಕರ್ತವ್ಯನಿರತ ಪಿಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಹಾಡಹಗಲೇ ಕರ್ತವ್ಯನಿರತ ಪಿಎಸ್‌ಐ ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಶವಂತಪುರದಲ್ಲಿ ನಡೆದಿದೆ.

ಶ್ರೀರಾಂಪುರ ಠಾಣೆ ಸರ್ಫುದ್ದೀನ್ ಹಲ್ಲೆಗೊಳಗಾದ ಪಿಎಸ್‌ಐ. ಉದಯ್ ಕುಮಾರ್ (34) ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಫುದ್ದೀನ್ ಅವರು ಭಾನುವಾರ ಮಧ್ಯಾಹ್ನ ಪ್ರಕರಣವೊಂದರ ತನಿಖೆಗಾಗಿ ಯಶವಂತಪುರದ ಆರ್‌ಟಿಒ ಕಚೇರಿ ಬಳಿ ಮಫ್ತಿಯಲ್ಲಿ ಬಂದಿದ್ದರು. ಈ ವೇಳೆ ಆರೋಪಿ ಬೈಕಿನಲ್ಲಿ ಬಂದ ಉದಯ್‌ ಕುಮಾರ್‌ ತನ್ನ ತಂದೆಯ ಹೋಟೆಲ್ ಎದುರು ನಿಂತಿದ್ದ ಸರ್ಫುದ್ದೀನ್ ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾನೆ.

ಆರೋಪಿ ಉದಯ್‌ ಕುಮಾರ್ ಕಲ್ಲಿನಿಂದ ಸರ್ಫುದ್ದೀನ್ ಅವರ ತಲೆಗೆ ಹೊಡೆದಿದ್ದು, ಬಲವಾದ ಏಟು ತಗುಲಿ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಸರ್ಫುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Edited By : Vijay Kumar
PublicNext

PublicNext

08/11/2020 11:58 pm

Cinque Terre

53.2 K

Cinque Terre

6