ಲಂಡನ್- ತಾಯಿ ಸ್ನಾನಕ್ಕೆ ಹೋಗಿದ್ದಾಗ ತಂದೆ ತನ್ನ ಮಕ್ಕಳನ್ನೇ ಅತ್ಯಂತ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಇಂತಹ ಮನಕಲಕುವ ಘಟನೆ ನಡೆದಿದ್ದು ಲಂಡನ್ ನಗರದ ಇಲ್ಫೋರ್ಡ್ ನಲ್ಲಿರುವ ಮನೆಯೊಂದರಲ್ಲಿ.
ತನ್ನ ಮಕ್ಕಳ ಮೇಲೆಯೇ ರಕ್ಕಸ ಪ್ರವೃತ್ತಿ ತೋರಿದ ಪಾಪಿ ಅಪ್ಪ ನಾದರಾಜ್ ನಿಥಿಯಾಕುಮಾರ್ ಎಂಬಾತ ಅಲ್ಲಿನ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಮೂರು ವರ್ಷದ ಗಂಡು ಮಗು ನಿಗೀಶ್ ಹಾಗೂ 19 ತಿಂಗಳ ಹೆಣ್ಣು ಮಗು ಪವಿನ್ಯಾ ಅಪ್ಪನಿಂದಲೇ ಕೊಲೆಯಾದ ನತದೃಷ್ಟ ಮಕ್ಕಳು.
ಪತ್ನಿ ನಿಶಾ ಸ್ನಾನಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ನಕ್ಕಳನ್ನು ಕೊಂದ ಆರೋಪಿ ತಂದೆ ನಾದರಾಜ್ ನಂತರ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನ ಆಸ್ಪತ್ರೆಗೆ ಸಾಗಿಸಲಾಗಿದೆ.
ಚಿಕಿತ್ಸೆ ಪಡೆದು ಗುಣಮುಖನಾಗಿರುವ ವಾದಿರಾಜ್ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಂಗಡಿ ಮಾಲೀಕನಾಗಿರುವ ನಾದರಾಜ್ ಗ್ರಾಹಕರ ವರ್ತನೆಯಿಂದ ಬೇಸತ್ತಿದ್ದನಂತೆ. ಹಾಗೂ ಮಾನಸಿಕ ಖಿನ್ನತೆ ಅನುಭವಿಸಿದ್ದನಂತೆ. ಇದಕ್ಕಾಗಿ ಮಕ್ಕಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದನಂತೆ.
PublicNext
06/11/2020 07:44 am