ಚಿಕ್ಕಮಗಳೂರು: 70 ಅಡಿಕೆ ಮರಗಳನ್ನ ಕಡಿದು 3500 ಕೆಜಿ ಹಸಿ ಅಡಿಕೆ ಕದ್ದ ಕಳ್ಳನನ್ನ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಹತ್ತಾರು ವರ್ಷಗಳಿಂದ ಬೆಳೆಸಿದ ಅಡಿಕೆ ಮರಗಳನ್ನ ಕಡಿದು ಹಾಕಿದ್ದ ಕಳ್ಳನ ಕೃತ್ಯ ನೋಡಿ ಅಡಿಕೆ ತೋಟದ ಮಾಲೀಕ ಭಾಸ್ಕರ್ ಕಂಗಾಲಾಗಿದ್ದರು. ಕೂಡಲೇ ಕಳ್ಳ ಶ್ರೀನಿವಾಸ್ ನನ್ನ ಹಿಡಿದು ಮನಸೋಯಿಚ್ಛೆ ಊರ ಜನರೆ ಜೊತೆಗೆ ಸೇರಿ ಸರಿಯಾಗಿಯೇ ಥಳಿಸಿದ್ದಾರೆ.
ಪೊಲೀಸ್ ಠಾಣೆ ವರೆಗೂ ಹಿಗ್ಗಾ-ಮುಗ್ಗಾ ಥಳಿಸುತ್ತಲೇ ಕರೆದುಕೊಂಡು ಬಂದು ಪೊಲೀಸರಿಗೂ ಈಗ ಒಪ್ಪಿಸಿದ್ದಾರೆ.
PublicNext
25/12/2021 10:04 am