ಭೋಪಾಲ್: ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಹಾರಿ ಕೆಲವು ಮೀಟರ್ ದೂರಕ್ಕೆ ಹಾರಿಬಿದ್ದ ಭೀಕರ ಅಪಘಾತ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ.
ಈ ಘಟನೆಯು ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರು ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸುತ್ತಾರೆ. ಈ ಪೈಕಿ ಓರ್ವ ಬೈಕ್ ಮೇಲೆ ಕುಳಿತಿದ್ದರೆ ಇಬ್ಬರು ಬೈಕ್‌ನಿಂದ ಇಳಿದು ಪಕ್ಕದಲ್ಲೇ ನಿಲ್ಲುತ್ತಾರೆ. ಈ ವೇಳೆ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಗುದ್ದುತ್ತದೆ. ಪರಿಣಾಮ ಬೈಕ್ ಮೇಲೆ ಕುಳಿತಿದ್ದ ಸವಾರ ಡಿಕ್ಕಿಯ ರಭಸಕ್ಕೆ ಹಾರಿ ಕೆಲವು ಮೀಟರ್ ದೂರ ಬೀಳುತ್ತಾನೆ. ಈ ಭೀಕರ ಅಪಘಾತದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
08/10/2022 05:11 pm