ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಿ ಮಸಣ ಸೇರಿದ.!

ಗದಗ: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಿ ಯುವಕನೋರ್ವ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆ ಹಾವೇರಿ ಜಿಲ್ಲೆ ಗುತ್ತಲ ಬಳಿ ನಡೆದಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದ ದಿಂಗಾಲೇಶ ಬಸಪ್ಪ ಅಣ್ಣಿಗೇರಿ ಮೃತ ಯುವಕ. ಮತ್ತೊಬ್ಬ ಯುವಕ ಕುಮಾರ ನಾವಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಗುತ್ತಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಂಗಾಲೇಶ ಹಾಗೂ ಕುಮಾರ್ ಇಬ್ಬರೂ ಮದ್ಯದ ಮತ್ತಿನಲ್ಲಿ ಬಾಲೇಹೊಸೂರದಿಂದ ಗುತ್ತಲಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯದಲ್ಲಿ ಸವಾರನ ನಿಯಂತ್ರಣ ತಪ್ಪಿದ ಬೈಕ್ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸೇತುವೆ ಮೇಲಿಂದ ಬಿದ್ದು ದಿಂಗಾಲೇಶ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಮಾರ ನಾವಿ ಗಾಯಗೊಂಡಿದ್ದಾರೆ. ಇದನ್ನು ನೋಡಿದ ಸುತ್ತಮುತ್ತಲಿನ ರೈತರು ಓಡಿ ಬಂದಿದ್ದಾರೆ. ನಂತರ ಬಾಲೇಹೊಸೂರಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

02/08/2022 01:53 pm

Cinque Terre

53.97 K

Cinque Terre

1