ಚಿಕ್ಕಮಗಳೂರು: ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ವೇಳೆ ಮಿಸ್ ಫೈರ್ ಆಗಿ ಅರಣ್ಯ ಸಿಬ್ಬಂದಿಯ ಕಾಲಿಗೆ ಗುಂಡು ತಗುಲಿದೆ.
ಚಿಕ್ಕಮಗಳೂರು ಜಿಲ್ಲೆ ಚುರ್ಚೆಗುಡ್ಡ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಾನೆಯನ್ನು ವಾಪಸ್ ಕಾಡಿಗೆ ಓಡಿಸಲು ನಾಗರಹೊಳೆ ಅಭಯಾರಣ್ಯದಿಂದ ಅರ್ಜುನ ಹಾಗೂ ಭೀಮಾ ಎಂಬ ಆನೆಗಳನ್ನು ಕರೆಸಿಕೊಳ್ಳಲಾಗಿತ್ತು. ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ತಿರುಗಿ ಬಿದ್ದಿದೆ. ಆಗ ಆನೆಯನ್ನು ಬೆದರಿಸಲು ಓರ್ವ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಅಚಾನಕ್ ಆಗಿ ಗುಂಡು ಅರಣ್ಯ ಸಿಬ್ಬಂದಿ ಮಲ್ಲೇಗೌಡ ಅವರ ಕಾಲಿಗೆ ತಾಕಿದೆ. ತಕ್ಷಣ ಮಲ್ಲೇಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/03/2022 10:33 pm