ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಮೆಂಟ್ ಕಂಬ ಮೈಮೇಲೆ ಬಿದ್ದು ಯುವಕ ಸಾವು

ಹುಬ್ಬಳ್ಳಿ: ಮೈಮೇಲೆ ಸಿಮೆಂಟ್ ಕಂಬ ಬಿದ್ದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಅಂಚಟಗೇರಿ ಚವರಗುಡ್ಡದ ಕೈಗಾರಿಕೆಯಲ್ಲಿ ನಡೆದಿದೆ. ರೈಲ್ವೆಯ ಹಳಿಗೆ ಹೊಂದಿಸುವ ಸಿಮೆಂಟ್ ಕಂಬ ತಯಾರಿಕಾ ಘಟಕದಲ್ಲಿ ಈ ಘಟನೆ ನಡೆದಿದ್ದು ಮೃತ ಯುವಕ ಇದೇ ಘಟಕದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.

ಸಂಜಯ್ (18) ಎಂಬಾತನೇ ಮೃತ ಯುವಕ. ಕೆಲಸದ ಸಮಯದಲ್ಲಿ ಸಿಮೆಂಟ್ ಕಂಬ ಯುವಕನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಯುವಕ ಮೃತಪಟ್ಟಿದ್ದು, ಇದಕ್ಕೆ ಕಾರ್ಖಾನೆಯ ನಿರ್ಲಕ್ಷ್ಯ ಕಾರಣ ಎಂದು ಮೃತನ ಸಂಬಂಧಿಗಳು ಆರೋಪಿಸುತ್ತಿದ್ದಾರೆ.

ಕಾರ್ಮಿಕರಿಗೆ ಸೂಕ್ತವಾದ ರಕ್ಷಣೆ ಹಾಗೂ ತರಬೇತಿ ನೀಡದೇ ಆಡಳಿತ ಮಂಡಳಿ ಯುವಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಯುವಕನ ಸಾವಿಗೆ ಆಡಳಿತ ಮಂಡಳಿ ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

27/02/2022 10:54 am

Cinque Terre

51.55 K

Cinque Terre

5

ಸಂಬಂಧಿತ ಸುದ್ದಿ