ಮೈಸೂರು: ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಪತ್ನಿಯಿಂದ ಸರಣಿ ಅಪಘಾತ ನಡೆದಿದೆ. ಕಾರ್ಪೊರೇಟರ್ ಪತ್ನಿ ಚಲಾಯಿಸುತ್ತಿದ್ದ ಕಾರು ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು,ಮತ್ತೊಬ್ಬ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಮತ್ತಿಬ್ಬರಿಗೆ ಇಬ್ಬರಿಗೆ ಗಾಯವಾಗಿದೆ.
ಇನ್ನು ನಿನ್ನೆ ಸಂಜೆ ಹುಣಸೂರು ಮುಖ್ಯ ರಸ್ತೆಯ ಪಡುವಾರಹಳ್ಳಿ ಜಂಕ್ಷನ್ ಬಳಿ ಘಟನೆ ನಡೆದಿದೆ.
ಇನ್ನು ಘಟನೆಯಲ್ಲಿ ಅನಂತಶೆಟ್ಟಿ (58) ಸಾವನ್ನಪ್ಪಿದ್ದು ಸಿದ್ದಪ್ಪ ಎಂಬಾತನಿಗೆ ಗಂಭೀರ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವಿ.ವಿ.ಪುರಂ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
04/12/2021 12:17 pm