ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಕ್ಕೆ ಕಾರು ಡಿಕ್ಕಿ- ಐವರ ದಾರುಣ ಸಾವು.!

ಚಂಡೀಗಡ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಇಸ್ಮಾಯಿಲಾಬಾದ್-ಶಹಾಬಾದ್ ರಸ್ತೆಯಲ್ಲಿ ಇಂದು (ಶುಕ್ರವಾರ) ನಡೆದಿದೆ.

ಮೃತರು 20ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ. ಅವರನ್ನು ಕುರುಕ್ಷೇತ್ರ ಜಿಲ್ಲೆಯ ಜೈನ್‌ಪುರ ಗ್ರಾಮದ ಗುರ್ಮೀತ್ ಸಿಂಗ್, ಗೌರಿಪುರ ಗ್ರಾಮದ ಗೋಲ್ಡಿ, ಬಸಂತಪುರ ಗ್ರಾಮದ ಅಂಕಿತ್ ಮತ್ತು ಬ್ರಿಜ್‌ಪಾಲ್ ಮತ್ತು ನಲ್ವಿ ಗ್ರಾಮದ ವಿಶಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 1:30ರ ಸುಮಾರಿಗೆ ಮಾರುತಿ 800 ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
PublicNext

PublicNext

05/11/2021 08:04 pm

Cinque Terre

72.75 K

Cinque Terre

1