ಕಲಬುರ್ಗಿ: ರಸ್ತೆ ಅಪಘಾತದಲ್ಲಿ ಕಲಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ (50) ಮೃತಪಟ್ಟಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಕಡೋಳ ಗ್ರಾಮದ ಬಳಿ ಇಂದು ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಡಾ. ಲಿಂಗರಾಜ ಶಾಸ್ತ್ರಿ ಅವರ ಪತ್ನಿಗೆ ಗಾಯಗಳಾಗಿದ್ದು, ಇಬ್ಬರು ಪುತ್ರರು ಅಪಾಯದಿಂದ ಪಾರಾಗಿದ್ದಾರೆ.
ಡಾ. ಲಿಂಗರಾಜ ಶಾಸ್ತ್ರಿ ಅವರು ಭಾನುವಾರ ರಜೆ ಇದ್ದುದರಿಂದ ಬಸವ ಕಲ್ಯಾಣ ನೋಡಲು ಕುಟುಂಬ ಸದಸ್ಯರೊಂದಿಗೆ ತೆರಳಿದ್ದರು. ಊಟ ಮುಗಿಸಿಕೊಂಡು ವಾಪಸ್ ಬರುವ ಹೊತ್ತಿನಲ್ಲಿ ಶಾಸ್ತ್ರಿ ಅವರ ಪುತ್ರ ಕಾರು ಚಾಲನೆ ಮಾಡುತ್ತಿದ್ದ. ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಏರ್ ಬ್ಯಾಗ್‌ಗಳು ತೆರೆದುಕೊಂಡಿವೆ. ಆದರೆ ಶಾಸ್ತ್ರಿ ಅವರ ಜೀವವುಳಿದಿಲ್ಲ. ಇತ್ತ ಅಪಘಾತ ಸಂಭವಿಸಿದ ಸ್ಥಳದಲ್ಲಿದ್ದ ಜೇನು ಹುಳುಗಳು ಶಾಸ್ತ್ರಿ ಅವರ ಪತ್ನಿ ಮೇಲೆ ದಾಳಿ ಮಾಡಿವೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
19/09/2021 08:53 pm