ನವದೆಹಲಿ: ಪ್ರೀತಿಗೆ ಅಡ್ಡಿಪಡಿಸಿದ ಗೆಳತಿಯ ಸಹೋದರನ ಹತ್ಯೆಗೈದ ಜನಪ್ರಿಯ ಯೂಟ್ಯೂಬರ್‌ನನ್ನು ನೊಯ್ಡಾದ ಪೊಲೀಸರು ಬಂಧಿಸಿದ್ದಾರೆ.
ನೊಯ್ಡಾದ ನಿಜಾಮುಲ್ ಖಾನ್ (26) ಬಂಧಿತ ಆರೋಪಿ. ಬೈಕ್ ಸ್ಟಂಟರ್ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ತೆರೆದಿದ್ದ. ಆತ ಯೂಟ್ಯೂಬ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ ಹೊಂದಿದ್ದ. ನಿಜಾಮುಲ್ ಅದೇ ನಗರದ ಕಮಲ್ ಶರ್ಮಾ ಎಂಬಾತನ ಸಹೋದರಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಕಮಲ್ ವಿರೋಧ ವ್ಯಕ್ತಪಡಿಸಿ ನಿಜಾಮುಲ್‌ಗೆ ಬುದ್ಧಿ ಹೇಳಿ, ತಂಗಿಯ ಮೊಬೈಲ್ ಕಿತ್ತುಕೊಂಡಿದ್ದ. ಅಕ್ಟೋಬರ್ 28ರಂದು ತನ್ನ ಸ್ನೇಹಿತರೊಡಗೂಡಿ ಬಂದ ನಿಜಾಮುಲ್, ಕಮಲ್ ಶರ್ಮಾನನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಕಮಲ್ ಶರ್ಮಾನ ಸಹೋದರ ನರೇಶ್ ಶರ್ಮಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯ ನಡೆಸಿದಾಗ ಆರೋಪಿ ನಿಜಾಮುಲ್, ಯೂಟ್ಯೂಬ್‌ನಿಂದ ಬಂದ ಆದಾಯಯದಲ್ಲಿ ಸ್ನೇಹಿತರಾದ ಸುಮೀತ್ ಮತ್ತು ಅಮೀತ್‌ಗೆ ಪಾಲು ನೀಡಿ, ಕೊಲೆ ಕೃತ್ಯದಲ್ಲಿ ಬೆಂಬಲ ಪಡೆದಿದ್ದ ಎನ್ನುವುದು ತಿಳಿದು ಬಂದಿದೆ.
PublicNext
04/11/2020 04:57 pm