ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಡವರ ಮಕ್ಕಳನ್ನು ಮೇಲ್ಛಾವಣಿಯಿಂದ ತಳ್ಳಿದಳು

ರಾಂಚಿ- ಐವರು ಮಕ್ಕಳನ್ನು ಎಳೆದುಕೊಂಡು ಮೇಲ್ಛಾವಣಿಗೆ ಕರೆದೊಯ್ದ ಮಹಿಳೆ ಅಲ್ಲಿಂದ ಕೆಳಕ್ಕೆ ಎಸೆದಿದ್ದಾಳೆ. ಆದ್ರೆ ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿಲ್ಲ. ತಕ್ಷಣ ಕೆಳಗಿದ್ದವರು ಮಕ್ಕಳನ್ನು ಕ್ಯಾಚ್ ಹಿಡಿದಿದ್ದಾರೆ‌‌‌. ಅಕ್ಕಪಕ್ಕದವರು ಈ ದೃಶ್ಯ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ‌.

ಈ ಘಟನೆ ನಡೆದಿದ್ದು ಝಾರ್ಖಂಡ್ ರಾಜ್ಯದ ಸಾಹಿಬ್ ಗಂಜ್ ನಲ್ಲಿ. ಮಕ್ಕಳು ಟಿವಿ ನೋಡುತ್ತಿದ್ದ ವೇಳೆ ಒಬ್ಬೊಬ್ಬರನ್ನೇ ಎಳೆದುಕೊಂಡು ಮೇಲ್ಛಾವಣಿಗೆ ಕರೆದೊಯ್ದಿದ್ದಾಳೆ. ಅಲ್ಲಿಂದ ಕೆಳಕ್ಕೆ ಎಸೆದು ಸಾಯಿಸಲು ಪ್ರಯತ್ನಿಸಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೇಳೆ ಮಕ್ಕಳ ರಕ್ಷಣೆ ಮಾಡಿದ ಇಬ್ಬರಿಗೆ ಗಾಯಗಳಾಗಿವೆ. ಪೊಲೀಸ್ ತನಿಖೆ ನಂತರ ಆಕೆ ಮಾನಸಿಕ ಅಸ್ವಸ್ಥಳು ಎಂದು ತಿಳಿದು ಬಂದಿದೆ.

Edited By : Nagaraj Tulugeri
PublicNext

PublicNext

02/11/2020 05:24 pm

Cinque Terre

46.93 K

Cinque Terre

2