ಹರಿದ್ವಾರ: ಹರಿಯಾಣದ ಕಾಲೇಜೊಂದರ ಮುಂದೆ ಪರೀಕ್ಷೆ ಮುಗಿಸಿ ಹೊರಬರುತ್ತಿದ್ದ 21 ವರ್ಷದ ಯುವತಿ ನಿಖಿತಾ ತೋಮರ್‌ನನ್ನು ಗುಂಡಿಕ್ಕಿ ಕೊಂದಿರುವ ಆರೋಪಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ ಎಂದು ಯೋಗಗುರು ಬಾಬಾ ರಾಮದೇವ್ ಒತ್ತಾಯಿಸಿದ್ದಾರೆ.
ಈ ಹತ್ಯೆಯನ್ನು ಲವ್ ಜಿಹಾದ್ ಎಂದು ಕರೆದಿರುವ ಯೋಗಗುರು ಬಾಬಾ ರಾಮ್‌ದೇವ್, ದೇಶದ ಹಲವೆಡೆ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳು ನಾಚಿಕೆಗೇಡು. ಇವು ಭಾರತದ ಹೆಸರಿನ ಮೇಲೆ ಕಳಂಕ ತರುತ್ತಿವೆ ಎಂದಿದ್ದಾರೆ. ಪತಂಜಲಿ ಯೋಗಪೀಠದಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದರಿಂದ ಮಾತ್ರ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
ಲವ್ ಜಿಹಾದ್ ಈ ಸಮಾಜಕ್ಕೆ ಮಾರಕ. ಅದನ್ನು ತಡೆಯಲು ಕಠಿಣ ಕಾನೂನು ರೂಪಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದ ಅವರು, ಇಂತಹ ಘಟನೆಗಳಿಗೆ ಬ್ರೇಕ್ ಹಾಕಲು ಲವ್ ಜಿಹಾದ್‌ನ್ನು ವಿರೋಧಿಸುವಂತೆ ಮುಸ್ಲಿಂ ಧರ್ಮಗುರುಗಳಿಗೆ ಕರೆ ನೀಡಿದರು.
PublicNext
30/10/2020 05:15 pm