ಭೋಪಾಲ್: ಪಾಪಿ ಪತಿಯೊಬ್ಬ ಪ್ರೀತಿಸಿ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿಯನ್ನ ನಾಯಿ ಚೈನ್ನಿಂದ ಕತ್ತು ಹಿಸುಕಿ, ಚಾಕು ಇರಿದು ಕೊಲೆಗೈದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಆರೋಪಿ ಕೃತ್ಯದ ಬಳಿಕ ಪತ್ನಿಯ ಶವ ಮುಂದೆ ಕುಳಿತು ಕಣ್ಣೀರಿಟ್ಟು ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.
22 ವರ್ಷದ ಪತ್ನಿ ಅಂಶು ಶರ್ಮಾ ಕೊಲೆಯಾದ ಪತ್ನಿ, ಹರ್ಷ ಕೊಲೆ ಮಾಡಿದ ಪತಿ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಶು ಮತ್ತು ಹರ್ಷ ಆಗಸ್ಟ್ 8ರಂದು ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದರು. ಮದುವೆ ಬಳಿಕ ದಂಪತಿ ಜಾವರಾ ಕಾಂಪೌಂಡ್ ನಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ದಂಪತಿ ನಡುವೆ ಸಣ್ಣ ಸಣ್ಣ ವಿಷಯಗಳಿಗೂ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
PublicNext
28/10/2020 08:11 pm