ಬೆಂಗಳೂರು- ಪ್ರಭಾವಿಗಳ ಮಕ್ಕಳಿಗೆ ಹಾಗೂ ಸ್ಯಾಂಡಲ್ ವುಡ್ ಗೆ ಡ್ರಗ್ ಪೂರೈಸುತ್ತಿದ್ದ ನೈಝೀರಿಯಾ ಮೂಲದ ವಿಟಿ ಎಂಬ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈತ 42 ಡ್ರಗ್ ಪೆಡ್ಲರ್ ಗಳೊಂದಿಗೆ ತನ್ನದೇ ಆದ ನೆಟ್ವರ್ಕ್ ಹೊಂದಿದ್ದ, ಕಾಲೇಜು ವಿದ್ಯಾರ್ಥಿಗಳು ಹಾಗೂ ರಾಜಕಾರಣಿಗಳ ಮಕ್ಕಳು ಈತನ ಟಾರ್ಗೆಟ್ ಆಗಿದ್ದರು ಎನ್ನಲಾಗಿದೆ.
ವಿಟಿ ಎಂಬ ಈ ಆರೋಪಿ ತನ್ನ ಮನೆಯಲ್ಲಿಯೇ ಡ್ರಗ್ ಪ್ಯಾಕ್ ಮಾಡಿ ತನ್ನ ಜಾಲದಲ್ಲಿ ಸಪ್ಲೈ ಮಾಡ್ತಿದ್ದ. ಲಾಕ್ ಡೌನ್ ವೇಳೆ ಬೇಡಿಕೆ ಹೆಚ್ಚಾಗಿತ್ತು. ಹಾಗೂ ಉತ್ತಮ ವ್ಯವಹಾರ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಈತನ ಕಳ್ಳ ವ್ಯವಹಾರಕ್ಕೆ ಕೈ ಜೋಡಿಸಿದ್ದ ಲೂಮ್ ಪೆಪ್ಪರ್ ಹಾಗೂ ಪ್ರತೀಕ್ ಶೆಟ್ಟಿ ಎಂಬ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
PublicNext
27/10/2020 12:53 pm