ನವದೆಹಲಿ: ಯುವತಿಯೋರ್ವಳು ತನ್ನ ಸಾವಿಗೆ ಕಾರಣನಾದ ಯುವಕನ ಹೆಸರನ್ನು ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯ ಭಜನಾಪುರದಲ್ಲಿ ನಡೆದಿದೆ.
23 ವರ್ಷದ ನಾಜಿಶಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದು ಐಪಿ ಯುನಿವರ್ಸಿಟಿಯಲ್ಲಿ ಬಿ.ಎಡ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಪೊಲೀಸರು ನಾಜಿಶಾಳ ಕೋಣೆ ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ತನ್ನ ಆತ್ಮಹತ್ಯೆಗೆ ಲೋನಿ ನಿವಾಸಿ ಹಾಜಿ ಸಲ್ಮಾನ್ ಎಂದು ನಾಜಿಶಾ ಪತ್ರದಲ್ಲಿ ಬರೆದಿದ್ದಾಳೆ.
ಸಲ್ಮಾನ್ ವರ್ತನೆಯಿಂದ ನಾಜಿಶಾ ನೊಂದಿದ್ದಳು. ವಿದ್ಯಾರ್ಥಿನಿ ಮನೆಗೆ ಬಂದಿದ್ದ ಸಲ್ಮಾನ್ ಆಕೆಯ ಪೋಷಕರಿಗೆ ಬೆದರಿಕೆ ಹಾಕಿದ್ದನು.
ಈ ವೇಳೆ ಪೋಷಕರು ಮತ್ತು ಸ್ಥಳೀಯರು ಸಲ್ಮಾನ್ ನನ್ನು ಹಿಡಿದು ಥಳಿಸಿ ಕಳುಹಿಸಿದ್ದರು.
ಈ ಮೊದಲೇ ಮಾನಸಿಕವಾಗಿ ಕುಗ್ಗಿದ ನಾಜಿಶಾ ಸಲ್ಮಾನ್ ಮನೆಗೆ ಬಂದು ಹೋದ ಘಟನೆ ಮತ್ತಷ್ಟು ಅಘಾತವನ್ನುಂಟು ಮಾಡಿತ್ತು.
ತನ್ನಿಂದಾಗಿ ತಂದೆ-ತಾಯಿಯ ಗೌರವಕ್ಕೂ ಧಕ್ಕೆ ಆಯ್ತು ಎಂದು ನಾಜಿಶಾ ಚಿಂತಿಸಿ ಆತ್ಮಹತ್ಯೆಯ ನಿರ್ಧಾರ ಮಾಡಿ ಡೆತ್ ನೋಟ್ ಬರೆದಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.
ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಜಿಶಾಳ ಮರಣೋತ್ತರ ಶವ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ.
ಘಟನೆ ಸಂಬಂಧ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ.
PublicNext
21/10/2020 08:26 am