ಲಕ್ನೋ: ಹತ್ರಾಸ್‌ನ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣವು ನಿಗೂಢವಾಗುತ್ತಲೇ ಸಾಗುತ್ತಿದೆ. ಈ ಘಟನೆಯ ಪ್ರಮುಖ ಸಾಕ್ಷ್ಯಗಳಲ್ಲಿ ಒಂದಾದ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಡಿಲೀಟ್ ಮಾಡಿರುವುದು ಪತ್ತೆಯಾಗಿದೆ.
ವೈದ್ಯರು ಸಿಸಿಟಿವಿ ದೃಶ್ಯವಳಿಯನ್ನು ಡಿಲೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸೆಪ್ಟಂಬರ್ 14ರಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ದಿನದ ಸಿಸಿಟಿವಿ ಫುಟೇಜ್ ನಮ್ಮ ಬಳಿ ಇಲ್ಲ ಎಂದು ಆಸ್ಪತ್ರೆ ಹೇಳಿದೆ. ಸಾಮಾನ್ಯವಾಗಿ ಒಂದು ತಿಂಗಳ ಫುಟೇಜ್ಗಳು ಸಿಸಿಟಿವಿಯ ಬ್ಯಾಕಪ್ನಲ್ಲಿ ಇರುವುದಿಲ್ಲ. ಆದರೆ ಇದು ಅತ್ಯಂತ ಮಹತ್ವದ ಸಾಕ್ಷ್ಯವಾಗಿದ್ದರೂ, ಅದನ್ನು ವೈದ್ಯರು ರಕ್ಷಿಸಿ ಏಕೆ ಇಟ್ಟುಕೊಂಡಿಲ್ಲ ಎನ್ನುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
PublicNext
15/10/2020 06:14 pm