ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿಯರ ಬೆತ್ತಲೆ ಫೋಟೋಗೆ ಪೀಡಿಸುತ್ತಿದ್ದ ಕಾಮುಕನ ಬಂಧನ

ಬೆಂಗಳೂರು: ಬೆತ್ತಲೆ ಫೋಟೋ ಕಳಿಸುವಂತೆ ಅಪ್ರಾಪ್ತ ಬಾಲಕಿಯರಿಗೆ ಪೀಡಿಸುತ್ತಿದ್ದ ಓರ್ವ ಕಾಮುಕನನ್ನು ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಕಾಡುಗೋಡಿ ನಿವಾಸಿ ಜಗದೀಶ್ ಬಂಧಿತ ಆರೋಪಿ. ಜಗದೀಶ್ ಯುವತಿಯರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಮಾಡಿ ಬಾಲಕಿಯರ ಜೊತೆಗೆ ಚಾಟಿಂಗ್ ಮಾಡುತ್ತಿದ್ದ. ಬಾಲಕಿಯರನ್ನೇ ಟಾರ್ಗೆಟ್ ಮಾಡಿ ಪದೇ ಪದೇ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದ. ಬೆತ್ತಲೆ ಫೋಟೋಗೆ ಡಿಮ್ಯಾಂಡ್ ಮಾಡುತ್ತಿದ್ದ. ಬೆತ್ತಲೆ ಫೋಟೋ ಕಳಿಸದಿದ್ದರೆ ಅಪ್ರಾಪ್ತೆಯರ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು I’m available ಎಂದು ಪೋಸ್ಟ್ ಹಾಕಿ ಫೋನ್ ನಂ‌ಬರ್ ಹಾಕುತ್ತಿದ್ದ.

ಆರೋಪಿ ಜಗದೀಶ್ ಇದೇ ರೀತಿ ವೈಟ್ ಫೀಲ್ಡ್​ನ ಅಪ್ರಾಪ್ತೆಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಳು. ಬಳಿಕ ಪೋಷಕರು ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಆರೋಪಿ ವಿರುದ್ಧ ಒಂದೇ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಹೀಗಾಗಿ ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ಟೀಂ ಸಿದ್ಧಪಡಿಸಿ ಬಂಧಿಸಿದ್ದಾರೆ.

Edited By : Vijay Kumar
PublicNext

PublicNext

14/10/2020 08:48 am

Cinque Terre

89.83 K

Cinque Terre

0

ಸಂಬಂಧಿತ ಸುದ್ದಿ