ಲಕ್ನೋ: ಕಳೆದ ದಿನಗಳಿಂದ ಉತ್ತರ ಪ್ರದೇಶದ ಕ್ರೈಂಗಳು ದೇಶದಲ್ಲಿ ಹಂಚನ ಸೃಷ್ಟಿಸಿವೆ. ಸದ್ಯ ಅಂತಹದ್ದೇ ಒಂದು ಅಮಾನವೀಯ ಪ್ರಕರಣ ನಡೆದಿದ್ದು, ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಲಲಿತ್‌ಪುರ್ ಜಿಲ್ಲೆಯ ರೋಡ ಗ್ರಾಮದಲ್ಲಿ ಸೋನು ಯಾದವ್ ಎಂಬ ವ್ಯಕ್ತಿ 65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ ಸೋನು ಯಾದವ್ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸೋನು ಯಾದವ್ ಆ ಕುಟುಂಬದವರಿಗೆ ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದ. ಆತನ ಬೆದರಿಕೆ ಹಾಗೂ ಒತ್ತಡಕ್ಕೆ ಮಣಿಯದಿದ್ದಾಗ ಬಲವಂತವಾಗಿ ಮೂತ್ರ ಕುಡಿಸಿ, ಕಟ್ಟಿಗೆಯಿಂದ ಹಲ್ಲೆಗೈದಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/10/2020 01:32 pm