ರಿಷಬ್ ಶೆಟ್ಟಿ ಅಭಿನಯ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಕಾಂತಾರ’ ಸಿನಿರಂಗದಲ್ಲಿಯೇ ಸಂಚಲನ ಸೃಷ್ಟಿಸಿದೆ.ಎಲ್ಲಿ ನೋಡಿದರಲ್ಲಿ ಕಾಂತಾರದ್ದೇ ಸದ್ದು ಸದ್ಯ ಈ ಸಿನಿಮಾ ನೋಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಜೊತೆಗೆ ಸಿನಿಮಾ ಬಗ್ಗೆ ಪತ್ರವನ್ನ ಕೂಡ ಬರೆದಿದ್ದಾರೆ.
ರಿಷಬ್ ಮತ್ತು ಸಪ್ತಮಿ ಗೌಡ ನಟನೆಯ `ಕಾಂತಾರಾ’ ದೈವಾರಾಧನೆಯ ಕುರಿತ ಕಥೆಯಾಗಿದೆ. ಈ ಚೆಂದದ ಕಥೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲಾ ಕಡೆ `ಕಾಂತಾರ’ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ಮಾಡಲು ಪ್ರೇಕ್ಷಕರಿಂದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಕಾಂತಾರ ಸಿನಿಮಾ ನೋಡಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ರಿಷಬ್ ಮೂವಿ ನೋಡಿ ಸುದೀಪ್ ಏನಂದ್ರು?
ನಾನು ಫೆಂಟಾಸ್ಟಿಕ್ ಎನಿಸುವ ಸಿನಿಮಾಗಳನ್ನು ನೋಡುತ್ತೇನೆ. ಆದರೆ ಅಪರೂಪಕ್ಕೆ ನಮ್ಮನ್ನು ಮಂತ್ರಮುಗ್ಧಗೊಳಿಸುವ ಸಿನಿಮಾ ನೋಡುತ್ತೇವೆ. ಅಂತಹ ಒಂದು ಸಿನಿಮಾ ಆಗಿರುವ ಕಾಂತಾರ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ರಿಷಬ್ ಫ್ಯಾಬುಲಸ್ ಆಗಿ ನಟಿಸಿದ್ದು ಸಂಪೂರ್ಣ ಶ್ರಮ ಹಾಕಿದ್ದಾರೆ. ಸುಮ್ಮನೆ ಆರಾಮವಾಗಿ ಕುಳಿತು ಅಚ್ಚರಿಪಟ್ಟು ವ್ಯಕ್ತಿಯೊಬ್ಬರು ಈ ರೀತಿಯಾಗಿ ಏನಾದರೂ ಹೇಗೆ ಯೋಚಿಸಲು ಸಾಧ್ಯ ಎಂದು ಆಲೋಚಿಸುವುದಷ್ಟೇ ನಿಮ್ಮ ಕೆಲಸ.
ಈ ಕಥೆ ಪೇಪರ್ ನಲ್ಲಿದ್ದರೆ ಅರ್ಧ ಕೂಡಾ ಮುಗಿಯದು. ಕ್ಲೈಮ್ಯಾಕ್ಸ್ ಪೇಪರ್ ನಲ್ಲಿದ್ದರೆ ಅದೊಂದು ಸಾಮಾನ್ಯ ಎಂಡಿಂಗ್ ಆಗಿರುತ್ತಿತ್ತು. ಇದು ನಿರ್ದೇಶಕರ ದೃಷ್ಟಿ. ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ಸಿದ್ಧವಾಗಿದೆ. ಅವರ ದೃಷ್ಟಿಕೋನದಲ್ಲಿ ಕಂಡಂತೆ ಸಿನಿಮಾ ಬಂದಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ.
ಇಂಥ ಕಥೆಯಲ್ಲಿ ನಂಬಿಕೆ ಇರಿಸಿದ ತಂಡಕ್ಕೆ ಮೆಚ್ಚುಗೆ. ಈ ಸಿನಿಮಾವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ನಿರ್ಮಿಸಿದ ಈ ಕ್ರಿಯಾಶೀಲ ತಂಡಕ್ಕೆ ದೊಡ್ಡ ಅಪ್ಪುಗೆ. ಅಜನೀತ್ ಹ್ಯಾಟ್ಸಾಫ್. ನೀವು ಮಾಸ್ಟರ್. ಹೊಂಬಾಳೆ ಫಿಲ್ಮ್ಸ್ ಕಂಗ್ರಾಟ್ಸ್. ಇಂಥದ್ದರಲ್ಲಿ ನಂಬಿಕೆ ಇಟ್ಟು ಜೊತೆ ನಿಂತದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಇಡೀ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
PublicNext
08/10/2022 08:27 pm