ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ (ಡಿಜಿಟಲ್ ಕರೆನ್ಸಿ) ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಡಿಜಿಟಲ್ ರೂಪಾಯಿಯು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಹಣಕಾಸು ಮತ್ತು ಪಾವತಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ ಎಂದು ಆರ್.ಬಿ.ಐ ಸ್ಪಷ್ಟನೆ ಸಹ ನೀಡಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕೆರೆನ್ಸಿ (ಸಿಬಿಡಿಸಿ) ಎಂಬುದು ನಿಯಂತ್ರಕರಿಂದ ಬೆಂಬಲಿತವಾದ ಮತ್ತು ಡಿಜಿಟಲ್ ಸ್ವರೂಪದಲ್ಲಿ ಸಂಗ್ರಹಿಸಲಾದ ಕರೆನ್ಸಿಯಾಗಿದೆ. ಇದನ್ನು ಕಾಗದದ ಕರೆನ್ಸಿಯಾಗಿ ಪರಿವರ್ತಿಸಬಹುದು ಮತ್ತು ಆರ್.ಬಿ.ಐನ ಬ್ಯಾಲೆನ್ಸ್ ಶೀಟನಲ್ಲಿ ಪ್ರತಿಬಿಂಬಿಸುತ್ತದೆ, ಆ ಮೂಲಕ ಅದಕ್ಕೆ ಕಾನೂನುಬದ್ಧ ಟೆಂಡರ್ ಸ್ಥಾನಮಾನವನ್ನು ನೀಡುತ್ತದೆ.
ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಭಾರತವು ತನ್ನದೇ ಆದ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.
PublicNext
08/10/2022 12:41 pm