ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ, ನಟ ಅಭಿಷೇಕ್ ಅಂಬರೀಷ್ ಅವರಿಗೆ ಇಂದು (ಅಕ್ಟೋಬರ್ 3) ಹುಟ್ಟುಹಬ್ಬದ ಸಂಭ್ರಮ. ಅಭಿಷೇಕ್ ಹುಟ್ಟುಹಬ್ಬಕ್ಕೆ 'ಬ್ಯಾಡ್ ಮ್ಯಾನರ್' ಚಿತ್ರತಂಡದಿಂದ ಭರ್ಜರಿ ಗಿಫ್ಟ್ ನೀಡಿದೆ.
ಹೌದು. ಅಭಿಷೇಕ್ ಅಂಬರೀಷ್ ಅಭಿನಯದ 'ಬ್ಯಾಡ್ ಮ್ಯಾನರ್' ಸಿನಿಮಾದ ಟೀಸರ್ ಇಂದು ಬಿಡುಗಡೆಗೊಂಡಿದೆ. ಈ ಟೀಸರ್‌ನಲ್ಲಿ ಅಭಿಷೇಕ್ 'ವ್ಯವಸ್ಥೆ ತಪ್ಪಲ್ಲ, ಮನುಷ್ಯನ ಯೋಚನೆ. ಯೋಚನೆ ತಪ್ಪು' ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ. ಅಭಿ ಎಂಟ್ರಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಅಭಿಷೇಕ್‌ಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಅಮರ್ ಸಿನಿಮಾದಲ್ಲೂ ರಚಿತಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅಭಿಷೇಕ್ ಎರಡನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಮತ್ತೆ ಅಭಿ ಜೊತೆ ಮಿಂಚಿದ್ದಾರೆ.
PublicNext
03/10/2022 03:14 pm