ಬಾಲಿವುಡ್ ನಲ್ಲೂ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ‘ಗುಡ್ಬೈ’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಬಂಗಾರ ಬಣ್ಣದ ಕಾಸ್ಟ್ಯೂಮ್ ಧರಿಸಿರುವ ನಟಿ ‘ನಾನು ಗೋಲ್ಡನ್ ಗರ್ಲ್’ ಎಂದು ತಮ್ಮನ್ನು ತಾವೇ ಕರೆದುಕೊಂಡಿದ್ದಾರೆ. ಆ ಕಾಸ್ಟ್ಯೂಮ್ ನಲ್ಲಿ ಸಖತ್ ಸೆಕ್ಸಿಯಾಗಿ ಕಾಣಿಸಿದ್ದು, ಟ್ರೋಲ್ ಕೂಡ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ತುಂಬ ಆ್ಯಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳಿಗಾಗಿ ಆಗಾಗ ಅಪ್ ಡೇಟ್ ನೀಡುತ್ತಲೇ ಇರುತ್ತಾರೆ. ಈಗ ಹೊಸ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
PublicNext
27/09/2022 06:17 pm