ಶಿಲ್ಪಾ ಶೆಟ್ಟಿ ಬಾಲಿವುಡ್ನಲ್ಲಿ ಈ ಮೊದಲಿನಿಂದಲೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಮಾಜದಲ್ಲಿ ಸಾಕಷ್ಟು ಗೌರವ ಇದೆ. ಆದರೆ, ರಾಜ್ ಕುಂದ್ರಾ ಅರೆಸ್ಟ್ ಆದ ನಂತರದಲ್ಲಿ ಅವರು ತಲೆತಗ್ಗಿಸಬೇಕಾದ ಪರಿಸ್ಥಿತಿ ಬಂತು. ತೀವ್ರ ಟೀಕೆಯನ್ನು ಅವರು ಅನುಭವಿಸಿದರು. ಕೆಲ ಸಮಯ ಸೋಶಿಯಲ್ ಮೀಡಿಯಾದಿಂದಲೂ ಶಿಲ್ಪಾ ಶೆಟ್ಟಿ ದೂರ ಉಳಿದರು. ಈಗ ಅವರ ಜೀವನ ಮೊದಲ ಸ್ಥಿತಿಗೆ ಮರಳಿದೆ. ಈ ಘಟನೆ ನಡೆದು ಒಂದು ವರ್ಷದ ಬಳಿಕ ರಾಜ್ ಕುಂದ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ ಮುಚ್ಚಿಕೊಂಡಿರುವ ಫೋಟೋವನ್ನು ರಾಜ್ ಕುಂದ್ರಾ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ‘ಅಸಲಿ ಕಥೆ ಗೊತ್ತಿಲ್ಲ ಎಂದರೆ ಬಾಯಿ ಮುಚ್ಕೊಂಡಿರಿ’ ಎಂದು ಬರೆಯಲಾಗಿದೆ. ‘ಆರ್ಥರ್ ರಸ್ತೆಯ ಜೈಲಿನಿಂದ ಹೊರಬಿದ್ದು ಒಂದು ವರ್ಷ. ಕಾಲ ಬಂದಾಗ ಎಲ್ಲದಕ್ಕೂ ನ್ಯಾಯ ಸಿಗಲಿದೆ. ಶೀಘ್ರವೇ ಸತ್ಯ ಹೊರಬೀಳಲಿದೆ. ಒಳ್ಳೆಯದನ್ನು ಬಯಸಿದ ಎಲ್ಲರಿಗೂ ಧನ್ಯವಾದ. ಟ್ರೋಲ್ ಮಾಡಿದ ಎಲ್ಲರಿಗೂ ಧನ್ಯವಾದ. ಅವರು ನನ್ನನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ ರಾಜ್ ಕುಂದ್ರಾ.
ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದರು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಹೊಂದಿ ಒಂದು ವರ್ಷ ಕಳೆದಿದೆ. ಈವರೆಗೆ ರಾಜ್ ಕುಂದ್ರಾ ಅವರು ಈ ಬಗ್ಗೆ ಮಾತನಾಡಿಲ್ಲ. ಈಗ ವರ್ಷದ ಬಳಿಕ ಅವರು ಮೌನ ಮುರಿದಿದ್ದಾರೆ. ‘ಅಸಲಿ ಕಥೆ ಗೊತ್ತಿಲ್ಲ ಎಂದರೆ ಬಾಯಿ ಮುಚ್ಕೊಂಡಿರಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಕೆಲವರು ಟ್ರೋಲ್ ಮಾಡಿದ್ದಾರೆ.
PublicNext
21/09/2022 06:08 pm