ನಟ ರಾಕ್ಷಸ ಡಾಲಿ ಧನಂಜಯ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಡಾಲಿ ನಟನೆಯ ಮಾನ್ಸೂನ್ ರಾಗ ರಿಲೀಸ್ ಆಗಿದ್ದು, ಸದ್ಯ ತೋತಾಪುರಿ, ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾಗಳ ರಿಲೀಸ್ಗೆ ಎದುರು ನೋಡ್ತಿದ್ದಾರೆ. ಇದರ ಜೊತೆಗೆ ಹೊಯ್ಸಳ, ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಚಿತ್ರದಲ್ಲಿಯೂ ಅಭಿನಯಿಸುತ್ತಿರುವ ಧನಂಜಯ್ ಅಕೌಂಟ್ ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ.
ಭೈರವ ಗೀತಾ’, ‘ಪುಷ್ಪ’ ಸಿನಿಮಾ ಮೂಲಕ ತೆಲುಗು ಸಿನಿಲೋಕಕ್ಕೂ ಪರಿಚಿತರಾದ ಡಾಲಿ ಈಗ ಬಹುಭಾಷಾ ನಟ. ಹೀಗಾಗಿ ಧನಂಜಯ್ ಗೆ ಬೇಡಿಕೆ ಹೆಚ್ಚಿದ್ದು, ಇದೀಗ ಕನ್ನಡ ಹಾಗೂ ತೆಲುಗು ಎರಡು ಭಾಷೆ ಚಿತ್ರಕ್ಕೆ ನಟರಾಕ್ಷಸ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್ ನಟಿಸಲಿರುವ 26ನೇ ಸಿನಿಮಾ.
ಈ ಚಿತ್ರದಲ್ಲಿ ಧನಂಜಯ್ ಜೊತೆಗೆ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ಕೂಡ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್ ನಟಿಸುತ್ತಿರುವ 26ನೇ ಕೂಡ ಹೌದು.
PublicNext
20/09/2022 02:24 pm