ಹೈದರಾಬಾದ್: ಅನನ್ಯಾ ಪಾಂಡೆ, ಟಾಲಿವುಡ್ ನಟ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರ ಹೈದರಾಬಾದ್ ಮನೆಯಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹೌದು..ಅನನ್ಯಾ ದಿಢೀರ್ ಅಂತ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಪೂಜೆಗಾಗಿ ಎಂದು ಹೇಳಲಾಗ್ತಿದೆ. ಮೊದಲ ಬಾರಿಗೆ ಅನನ್ಯಾ ಟಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮತ್ತು ಅನನ್ಯಾ ಇಬ್ಬರು ದೇಶದ ನಾನಾಭಾಗಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಮನೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ವಿಜಯ್ ಮತ್ತು ಅನನ್ಯಾ ಇಬ್ಬರು ಒಟ್ಟಿಗೆ ಕುಳಿತು ದೇವಕೊಂಡ ಅವರ ತಾಯಿಯ ಆಶೀರ್ವಾದ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ.
ಲಿಗರ್ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನಲೆ ವಿಜಯ್ ತಾಯಿ ವಿಶೇಷ ಪೂಜೆ ಮಾಡಿಸಿದ್ದಾರೆ. ಹಾಗಾಗಿ ಲೈಗರ್ ಸ್ಟಾರ್ ಪೂಜೆಯಲ್ಲಿ ಹಾಜರಾಗಿದ್ದರು. 'ಈ ತಿಂಗಳು ಪೂರ್ತಿ ದೇಶದ ಎಲ್ಲಾ ಭಾಗಗಳಲ್ಲಿ ಸುತ್ತಾಡಿದ್ದೀವಿ. ತುಂಬಾ ಪ್ರೀತಿ ಮತ್ತು ಅಭಿಮಾನ ಸಿಕ್ಕಿದೆ. ಇದು ದೇವರ ದಯೆ. ಆದರೆ ನಮ್ಮ ರಕ್ಷಣೆಗಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಕೈಗೆ ರಕ್ಷಣೆಯ ಬ್ಯಾಂಡ್ ಕಟ್ಟಿದ್ದಾರೆ. ಈಗ ಅವರು ನೆಮ್ಮದಿಯಾಗಿ ಮಲಗುತ್ತಾರೆ. ನಾವು ನಮ್ಮ ಪ್ರವಾಸ ಮುಂದುವರೆಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಅನನ್ಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ಜೋರಾಗಿದೆ. ಇತ್ತ ವಿಜಯ್ ರಶ್ಮಿಕಾಗೂ ಕೈ ಕೊಟ್ಟಿದ್ದಾರೆ ಎನ್ನಲಾಗಿದೆ. ಇದೀಗ ಅನನ್ಯಾ, ದೇವರಕೊಂಡ ಮನೆಯಲ್ಲೇ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
PublicNext
17/08/2022 06:34 pm